ರಾಯಬಾಗ :ತಾಲೂಕಿನ ಚಿಂಚಲಿಯಲ್ಲಿ ಹಿಂದೂ ಸಮ್ಮೇಳನ ಸಮಾರಂಭ ನಡೆಯಿತು. ಮೊದಲಿಗೆ ಶಾಲಾ ಮಕ್ಕಳು ಹಾಗೂ ಮಹಿಳೆಯರು, ಗಣ್ಣ್ಯ ಮಾನ್ಯರಿಂದ ಭಾರತಮಾತೆಯ ಭಾವಚಿತ್ರ ಭವ್ಯ ಶೋಭಾ ಯಾತ್ರೆ ಮಾಡಲಾಯಿತು.
ವೇದಿಕೆಯ ಮೇಲೆ ನೊಬೆಲ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ಪ್ರೇರಣಾ ಕನ್ನಡ ಮಾಧ್ಯಮ ಶಾಲೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ವೇದಿಕೆ ಮೇಲೆ ದಿವ್ಯ ಸಾನಿಧ್ಯ ವಹಿಸಿದಂತಹ ಪರಮಪೂಜ್ಯ ಶ್ರೀ ಸಿದ್ದಪ್ರಸಾದ ಮಹಾಸ್ವಾಮಿಗಳು ಶ್ರೀ ವೇದಾಂತ ಕೇಸರಿ ಮಲ್ಲಿಕಾರ್ಜುನ ಗುರುದೇವಶ್ರಮ ಚಿಂಚಲಿ. ಪರಮ ಪೂಜ್ಯ ಶ್ರೀ ಡಾಕ್ಟರ್ ಅಭಿನವ ಬ್ರಹ್ಮಾನಂದ ಮಹಾಸ್ವಾಮಿಗಳು ಶ್ರೀ ಗುರು ಬ್ರಹ್ಮಾನಂದಾಶ್ರಮ ಪರಮಾನಂದವಾಡಿ.

ಪರಮಪೂಜ್ಯ ಬಸಯ್ಯ ಸ್ವಾಮಿಗಳು ಸಿದ್ಧಾರೂಢ ಮಠ ಅಲಕನೂರು.ಅಭಿನವ ಕಲ್ಮೇಶ್ವರ ಮಹಾರಾಜರು ಸುಕ್ಷೇತ್ರ ಸಿರುಗುರ.
ದಿವ್ಯ ಸಾನಿಧ್ಯವನ್ನು ವಹಿಸಿಕೊಂಡಿದ್ದರು .ಹಾಗೂ ಎಲ್ಲ ಪೂಜ್ಯರು ಗಳು ಹಿಂದೂ ಧರ್ಮದ ಬಗ್ಗೆ ಮನಮುಟ್ಟುವಂತೆ ಮಾತನಾಡಿದರು.
ಬೆಳಗಾವಿ ವಿಭಾಗ ಬೌದ್ಧಿಕ ಪ್ರಮುಖರು ಆದ, ಶ್ರೀಯುತ ರಾಮಚಂದ್ರ ಎಡಕೆರವರು ದೇಶ ಭಕ್ತರ ತ್ಯಾಗ ಬಲಿದಾನ
ಹಾಗೂ ಜಾತಿ ಧರ್ಮಗಳ ಬಗ್ಗೆ ಅತಿ ಸುಂದರವಾಗಿ ವರ್ಣಿಸಿದರು.
ಮಾತೆ ವೈಭವಿ ಕುಲಕರ್ಣಿ. ಈ ಸಂದರ್ಭದಲ್ಲಿ ಹಿಂದೂ ಧರ್ಮ ಹಾಗೂ ಮಹಿಳೆಯರು ಸಮಾಜದಲ್ಲಿ ಹೇಗಿರಬೇಕು. ಹಾಗೂ ನಾಗರೀಕ ಸಮಾಜದ ಬಗ್ಗೆ ಹೇಳಿದರು.
ಭರತೇಶ ಬನವಣೆ ,ಎಲ್ ಬಿ ಚೌಗುಲಾ,ಮತಿ ನಂದಿತಾ ಒಡೆಯರ್ ,ಮಹೇಶ್ ಕರಮಡಿ,ರಾಜಶೇಖರ ಕಣದಾಳೆ,ರಾಜು ಐತವಾಡೆ
ರಮೇಶ್ ತೇಲಿ ಈ ಸಮಾರಂಭಕ್ಕೆ ಶಾಸಕರು ಶ್ರೀ ದುರ್ಯೋಧನ ಐಹೊಳೆ. ರಾಜಕೀಯ ಮುಖಂಡರು. ನಾಗರಿಕರು ಅನೇಕ ಗಣ್ಯಮಾನ್ಯರು ಆಗಮಿಸಿದ್ದರು.
ವರದಿ : ಭರತ ಮುರಗುಂಡೆ




