Ad imageAd image

ಸಂಪಿಗೆ ಶ್ರೀನಿವಾಸ ದೇವಾಲಯದಲ್ಲಿ ಅಹಿಂದುಗಳ ವ್ಯಾಪಾರ: ಹಿಂದೂ ಫೈರ್ ಬ್ರಾಂಡ್ ಮುತಾಲಿಕ್ ಕಿಡಿ

Bharath Vaibhav
ಸಂಪಿಗೆ ಶ್ರೀನಿವಾಸ ದೇವಾಲಯದಲ್ಲಿ ಅಹಿಂದುಗಳ ವ್ಯಾಪಾರ: ಹಿಂದೂ ಫೈರ್ ಬ್ರಾಂಡ್ ಮುತಾಲಿಕ್ ಕಿಡಿ
WhatsApp Group Join Now
Telegram Group Join Now

ತುರುವೇಕೆರೆ: ಸರ್ಕಾರದ ಮುಜರಾಯಿ ಇಲಾಖೆಗೆ ಸೇರಿದ ಸಂಪಿಗೆ ಶ್ರೀ ಶ್ರೀನಿವಾಸ ದೇವಸ್ಥಾನದಲ್ಲಿ ಗೋಹಂತಕರು, ಗೋಭಕ್ಷಕರು, ಅಹಿಂದುಗಳಿಗೆ ವ್ಯಾಪಾರ ಮಾಡಲು ಅವಕಾಶ ಮಾಡಿಕೊಟ್ಟಿರುವುದು ಸರಿಯಲ್ಲ ಎಂದು ಹಿಂದೂ ಫೈರ್ ಬ್ರಾಂಡ್, ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿಕಾರಿದರು.

ವೈಕುಂಠ ಏಕಾದಶಿ ಪ್ರಯುಕ್ತ ತಾಲ್ಲೂಕಿನ ಇತಿಹಾಸ ಪ್ರಸಿದ್ದ ಸಂಪಿಗೆ ಶ್ರೀನಿವಾಸ ದೇವಾಲಯಕ್ಕೆ ಶ್ರೀನಿವಾಸನ ದರ್ಶನಕ್ಕೆ ಆಗಮಿಸಿದ್ದ ಅವರು ಮಾಧ್ಯಮದೊಂದಿಗೆ ಮಾತನಾಡಿ, ಸರ್ಕಾರದ ಮುಜರಾಯಿ ನಿಯಮಗಳ ಪೈಕಿ ೧೨ನೇ ನಿಯಮದಲ್ಲಿ ಮುಜರಾಯಿಗೆ ಸೇರಿದ ದೇವಸ್ಥಾನಗಳಿಗೆ ಅಹಿಂದುಗಳು ಅಂದರೆ ಮುಸಲ್ಮಾನರಿಗೆ, ಕ್ರಿಶ್ಚಿಯನ್ನರಿಗೆ ಅವಕಾಶವಿಲ್ಲ ಎಂದಿದೆ. ಆದರೆ ಈ ಸಂಪಿಗೆಯ ಶ್ರೀನಿವಾಸ ದೇವಾಲಯದಲ್ಲಿ ವೈಕುಂಠ ಏಕಾದಶಿಯ ವಿಶೇಷ ದಿನದಂದು ಅಹಿಂದುಗಳಿಗೆ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಿದ್ದಾರೆ. ಈ ಬಗ್ಗೆ ತಾಲೂಕು ಆಡಳಿತ, ಮುಜರಾಯಿ ಇಲಾಖೆ ಹಾಗೂ ಸಚಿವಾಲಯ ಗಮನಹರಿಸಬೇಕು ಎಂದರು.

 

ಹಿಂದೂಗಳಿಗೆ ಪವಿತ್ರವಾದ ದಿನ. ವೈಕುಂಠ ಏಕಾದಶಿ ಎಂಬುದು ಅತ್ಯಂತ ಪವಿತ್ರವಾದ ದಿನ. ಸಂಪಿಗೆಯ ಶ್ರೀನಿವಾಸ ದೇವಾಲಯದಲ್ಲಿ ಇತಿಹಾಸ ಪ್ರಸಿದ್ಧವಾದ ತಿರುಪತಿ ತಿಮ್ಮನ ದೇವಾಲಯದ ರೀತಿಯಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತವೆ. ಈ ಸ್ಥಳದಲ್ಲಿ ನಾನು ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿದ್ದಾಗ ಬಂದಿದ್ದ ಹಳೇ ನೆನಪುಗಳಿವೆ. ಸಂಘ ಹಿಂದೂ ರಾಷ್ಟ್ರದ ನಿರ್ವಹಣೆಗೋಸ್ಕರವಾದ ಸಂಸ್ಥೆ. ಸಂಪಿಗೆ ದೇವಾಲಯ ಜಾತಿ, ಮತ, ಪ್ರಾಂತ, ಪಕ್ಷ, ಪಂಥದ ಬೇಧವಿಲ್ಲದೆ ಎಲ್ಲರಿಗೂ ಪ್ರವೇಶ ನೀಡುವಂತಹ ಪವಿತ್ರ ಸ್ಥಳವಾಗಿದೆ. ಈ ಸ್ಥಳದಲ್ಲಿ ಇಂದು ವೈಕುಂಠ ಏಕಾದಶಿಯ ಪ್ರಯುಕ್ತ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿದೆ. ಭಕ್ತಾಧಿಗಳು ಸ್ವಾಮಿಯ ದರ್ಶನ ಮಾಡಿ ಸಂಪನ್ನರಾಗಬೇಕೆಂದರು.

ಸ್ವಾಮಿಯ ದೇವಾಲಯದ ಆವರಣದಲ್ಲಿ ಅಹಿಂದುಗಳಿಗೆ ವ್ಯಾಪಾರಕ್ಕೆ ಮುಂದಿನ ದಿನಗಳಲ್ಲಿ ಮತ್ತೆ ಅವಕಾಶ ಕಲ್ಪಿಸಬಾರದೆಂದು ದೇವಾಲಯದ ಆಡಳಿತ ಮಂಡಳಿಗೆ, ತಾಲೂಕು ಆಡಳಿತಕ್ಕೆ, ಮುಜರಾಯಿ ಇಲಾಖೆಗೆ, ಸಂಬಂಧಪಟ್ಟ ಸಚಿವರಿಗೆ ಮನವಿ ಮಾಡುತ್ತೇನೆಂದ ಅವರು, ಪ್ರತಿಯೊಬ್ಬ ಹಿಂದೂಗಳು ರಾಷ್ಟ್ರ ರಕ್ಷಣೆಗೆ, ಧರ್ಮ ರಕ್ಷಣೆಗೆ ಕಂಕಣಬದ್ಧರಾಗಿರಬೇಕೆಂದು ಮನವಿ ಮಾಡಿದರು.

ವರದಿ: ಗಿರೀಶ್ ಕೆ ಭಟ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!