Ad imageAd image

ಹಿಂದು’ ಅನ್ನೋದು ಅವಮಾನಕರ ಶಬ್ದ : ಕೆ.ಎಸ್ ಭಗವಾನ್ ಮತ್ತೊಂದು ವಿವಾದ 

Bharath Vaibhav
ಹಿಂದು’ ಅನ್ನೋದು ಅವಮಾನಕರ ಶಬ್ದ : ಕೆ.ಎಸ್ ಭಗವಾನ್ ಮತ್ತೊಂದು ವಿವಾದ 
WhatsApp Group Join Now
Telegram Group Join Now

ರಾಯಚೂರು. : ‘ಹಿಂದು’ ಅನ್ನೋದು ಅವಮಾನಕರ ಶಬ್ದ ಎಂದು ಚಿಂತಕ ಕೆ.ಎಸ್ ಭಗವಾನ್ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ.

ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ತಿಂಥಣಿ ಬ್ರಿಡ್ಜ್ ಕಾಗಿನೆಲೆ ಕನಕ ಗುರುಪೀಠದಲ್ಲಿ ಆಯೋಜಿಸಿದ್ದ ಹಾಲುಮತ ಸಾಹಿತ್ಯ ಕಮ್ಮಟ ಕಾರ್ಯಕ್ರಮ ಉದ್ಘಾಟಿಸಿ ಭಾಷಣ ಮಾಡಿದ ಪ್ರೊ.ಕೆ.ಎಸ್.ಭಗವಾನ್ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

ಕಾಶ್ಮೀರದ ಶೈವ ಗ್ರಂಥಗಳಲ್ಲಿ ಹಿಂದೂ ಪದಕ್ಕೆ ಯಾರೂ ಹೀನನಾಗಿದ್ದಾರೊ, ಯಾರು ದೂಷಣೆಗೆ ಒಳಗಾಗಿದ್ದಾರೋ ಅವನು ಹಿಂದೂ ಅಂತ ಇದೆ. ಹಾಗಾಗಿ ಹಿಂದೂ ಅನ್ನೋ ಶಬ್ದ ಬಹಳ ಅಪಮಾನಕರವಾಗಿದೆ ಎಂದರು.

ಹಿಂದೂ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರು ಸಂವಿಧಾನ ತೆಗೆದು ಮನು ಸ್ಮೃತಿ ತರುವ ಹುನ್ನಾರ ನಡೆದಿದೆ ಎಂದು ಆರೋಪಿಸಿದ್ದಾರೆ.

ಮಠಗಳ ಬಗ್ಗೆ ಜನರಿಗೆ ಸರಿಯಾದ ತಿಳುವಳಿಕೆ ಇಲ್ಲ. ಸನಾತನ, ವೈದಿಕ ಧರ್ಮ, ಬ್ರಾಹ್ಮಣ ಧರ್ಮ ಜಾತಿ ವ್ಯವಸ್ಥೆ ಪ್ರೋತ್ಸಾಹಿಸುತ್ತದೆ. ನಾಲ್ಕು ವರ್ಣಗಳಲ್ಲಿ ಕ್ಷತ್ರಿಯ, ವೈಶ್ಯ ವ್ಯವಸ್ಥೆ ನಶಿಸಿವೆ. ಸುಳ್ಳಿನ ಕಂತೆ, ಬುದ್ಧ ಬಸವ ಅಂಬೇಡ್ಕರ್ ಧರ್ಮವೇ ರಾಷ್ಟ್ರೀಯ ಧರ್ಮವಾಗಿದೆ ಎಂದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!