ಪಾವಗಡ: 28ನೇ ತಾರೀಕಿನ ಭಾನುವಾರದಂದು ಪಾವಗಡದಲ್ಲಿ ವಿಶ್ವ ಹಿಂದೂ ಪರಿಷತ್ ಭಜರಂಗದಳದಿಂದ ಪ್ರತಿಷ್ಠಾಪನೆ ಮಾಡಿರುವ ಹಿಂದೂ ಮಹಾ ಗಣಪತಿಯ ಶೋಭಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಾಲ್ಲೂಕು ಶ್ರೀರಾಮ ಸೇನೆ ಅಧ್ಯಕ್ಷ ಕಾವಲಗೆರೆ ರಾಮಾಂಜಿ ತಿಳಿಸಿದರು.
ದಿನಾಂಕ, 16/09/25 ಶುಕ್ರವಾರ ರಂದು ಅರಳಿಕಟ್ಟೆ ಗಣಪತಿ ಬಳಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಭಾನುವಾರ ಬೆಳಗ್ಗೆ 11 ಗಂಟೆಗೆ ಮಧುಗಿರಿ ಊರು ಬಾಗಿಲು ಸಮೀಪದ ಅರಳಿಕಟ್ಟೆಯಿಂದ ಹಿಂದೂ ಮಹಾಗಣಪತಿಯ ಶೋಭಾಯಾತ್ರೆ ಪ್ರಾರಂಭಗೊಳ್ಳಲಿದೆ, ಶೋಭಾಯಾತ್ರೆಯಲ್ಲಿ ಹಿಂದೂ ಫೈರ್ ಬ್ರಾಂಡ್ ಬಸನ್ ಗೌಡ ಪಾಟೀಲ್ ಯತ್ನಾಳ್, ಚಿತ್ರದುರ್ಗ ಸಂಸದ ಗೋವಿಂದ ಎಂ ಕಾರಜೋಳ, ಪಾವಗಡ ಶಾಸಕ ಎಚ್ ವಿ ವೆಂಕಟೇಶ್, ಮಾಜಿ ಶಾಸಕ ಕೆಎಂ ತಿಮ್ಮರಾಯಪ್ಪ. ಎಂಎಲ್ಸಿ ಸಿ.ಟಿ. ರವಿ, ಪ್ರತಾಪ್ ಸಿಂಹ, ನಿಖಿಲ್ ಕುಮಾರಸ್ವಾಮಿ, ಚಿದಾನಂದ್ ಎಂ ಗೌಡ, ಹಿಂದೂ ಮುಖಂಡ ಶರಣ್ ಪಂಪ್ವೆಲ್, ರಘು ಸಕಲೇಶಪುರ, ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಂಘ-ಸಂಸ್ಥೆಗಳು ಭಾಗವಹಿಸಲಿವೆ ಜೊತೆಗೆ ಹತ್ತಕ್ಕೂ ಅಧಿಕ ಕಲಾತಂಡಗಳೊಂದಿಗೆ ವೈಭವ ಶೋಭಯಾತ್ರೆಯನ್ನು ಏರ್ಪಡಿಸಲಾಗುತ್ತದೆ ಎಂದು ತಿಳಿಸಿದರು.
ಬಜರಂಗದಳ ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಗುಪ್ತ ಮಾತನಾಡಿ 28ರ ಭಾನುವಾರ ಬೆಳಗ್ಗೆ 11 ಗಂಟೆಯಿಂದ ಮಧುಗಿರಿ ಊರು ಬಾಗಿಲು ಸಮೀಪದ ಅರಳಿಕಟ್ಟೆಯಿಂದ ಪ್ರಾರಂಭಗೊಂಡ ಶುಭಾಯಾತ್ರೆ, ನಾಗರಕಟ್ಟೆ, ಶಿರಾರಸ್ತೆ, ಶನಿಮಹಾತ್ಮ ವೃತ್ತ, ಬಳ್ಳಾರಿ ರಸ್ತೆ, ಅಂಬೇಡ್ಕರ್ ವೃತ್ತದ ವರೆಗೂ ತೆರಳಿ ಹಿಂತಿರುಗಿ ಶನಿಮಹಾತ್ಮ ವೃತದಿಂದ ತುಮಕೂರು ರಸ್ತೆಯ ಮೂಲಕ ಕಣಿವೆ ಸಮೀಪದ ವಿಸರ್ಜನಾ ಸ್ಥಳಕ್ಕೆ ತೆರಳುವುದಾಗಿ ತಿಳಿಸಿದರು ಮೆರವಣಿಗೆಯಲ್ಲಿ 15 ಸಾವಿರಕ್ಕೂ ಅಧಿಕ ಜನ ಹಿಂದೂ ಕಾರ್ಯಕರ್ತರು ಮತ್ತು ಭಕ್ತರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು
ಈ ಸಂದರ್ಭದಲ್ಲಿ ಹಿಂದೂ ಮುಖಂಡರಾದ ಅಲ್ಕುಂದಿರಾಜ್, ರಘು, ವಾಸು ಮಂಜುನಾಥ್, ಅನಿಲ್ ಯಾದವ್, ಶೇಖರ್ ಬಾಬು, ಬೇಕರಿ ನಾಗರಾಜ್, ಹರ್ಷ, ರಾಕೇಶ್, ಚೇತನ್ ಸೇರಿದಂತೆ ಹಲವರು ಹಾಜರಿದ್ದರು.
ವರದಿ: ಶಿವಾನಂದ ಪಾವಗಡ




