ಬೆಂಗಳೂರು : -ಅಖಿಲ ಭಾರತದ ಹಿಂದೂಗಳ ಕ್ಷೇಮಕ್ಕಾಗಿ ಹಿಂದೂ ರಕ್ಷಾ ನಿಧಿ ಸಂಗ್ರಹಿಸುವ ಅಭಿಯಾನವನ್ನು ಆರಂಭಿಸಿದ್ದೇವೆ. ಹಾಗೆಯೇ ರಾಷ್ಟ್ರಾದ್ಯಂತ ಹನುಮಾನ್ ಚಾಲಿಸಾ ಕೇಂದ್ರಗಳನ್ನು ತೆರೆಯುವ ಕಾರ್ಯಕ್ರಮ ಆರಂಭವಾಗಿದೆ.
ಹಿಂದೂಗಳ ರಕ್ಷಣೆಗೆ ನಾವು ಸದಾ ಸಿದ್ದರಿದ್ದೇವೆ’, ಎಂದು ಅಂತಾರಾಷ್ಟ್ರೀಯ ಹಿಂದೂ ಪರಿಷತ್ ನ ಸಂಸ್ಥಾಪಕ ಅಧ್ಯಕ್ಷ ಡಾ. ಪ್ರವೀಣ್ ಭಾಯಿ ತೊಗಾಡಿಯಾ ಹೇಳಿದರು
ಬೆಂಗಳೂರಿನ ಪ್ರವಾಸದಲ್ಲಿರುವ ಅವರು ಅಂತಾರಾಷ್ಟ್ರೀಯ ಹಿಂದೂ ಪರಿಷತ್ ವತಿಯಿಂದ ಹಮ್ಮಿಕೊಂಡಿರುವ ಹಿಂದೂ ರಕ್ಷಾ ನಿಧಿ ಸಂಗ್ರಹ ಕಾರ್ಯಕ್ರಮದಲ್ಲಿ ಭಾಗವಹಿಸಿ ದಾನಿಗಳ ಮನೆಗೆ ಭೇಟಿ ನೀಡುವ ವೇಳೆ ವಿದ್ಯಾರಣ್ಯಪುರದಲ್ಲಿರುವ ಕಾಟಿ ಸಮಾಜದ ಅಧ್ಯಕ್ಷ ಜವರಿಲಾಲ್ ಮತ್ತು ಸಹೋದರ ಮಹೇಂದ್ರ ಲಾಲ್ ಇವರ ಸ್ವಗ್ರಹಕ್ಕೆ ಭೇಟಿ ನೀಡಿ ರಕ್ಷಾ ನಿಧಿಗೆ ನಿಧಿ ಸಂಗ್ರಹಿಸಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಹಿಂದೂ ಹೆಲ್ಪ್ ಲೈನ್ ಖಜಾಂಚಿ ವಿಜಯ್ ರೆಡ್ಡಿ, ಅಂತರಾಷ್ಟ್ರೀಯ ಹಿಂದೂ ಪರಿಷತ್ ನ ರಾಷ್ಟ್ರೀಯ ಬಜರಂಗದಳದ ರಾಜ್ಯಾಧ್ಯಕ್ಷ ವಿ ಆನಂದ್, ನಾರಾಯಣ ಲಾಲ್, ವಿಶ್ವ ಹಿಂದೂ ಪರಿಷತ್ ಹಿರಿಯ ಮುತ್ಸದ್ದಿ ರಮೇಶ್ ಜೀ, ಬೆಂಗಳೂರು ಜಿಲ್ಲಾಧ್ಯಕ್ಷ ಸೌಂದರ್ ರಾಜನ್, ಹಿಂದೂ ಮುಖಂಡರುಗಳಾದ ಪ್ರಕಾಶ್, ಮುನಿರಾಜು, ಗೋವಿಂದ್, ಶಂಕರ್, ಆರ್ ಎಸ್ಎಸ್ ಮುಖಂಡ ಶ್ರೀನಿವಾಸ್ ರಾವ್,ಕನ್ನಡ ಸೇನೆ ಉಪಾಧ್ಯಕ್ಷ ದೀಪಕ್ ಎಂ,ಮಾರೆಪ್ಪನ ಪಾಳ್ಯ, ಹಿಂದೂ ಸಂಘಟನೆಗಳ ಮಹಿಳಾ ಮುಖ್ಯಸ್ಥೆ ಲತಾ,ಭೀಮ ಸಂದೇಶ ಪತ್ರಿಕೆಯ ಸಂಪಾದಕ ವೈ ಜಿ ನರಸಿಂಹಮೂರ್ತಿ, ಕರ್ನಾಟಕ ನ್ಯೂಸ್ ಪ್ರೆಸ್ ಕ್ಲಬ್ ಅಧ್ಯಕ್ಷ ಅಯ್ಯಣ್ಣ ಮಾಸ್ಟರ್, ಪತ್ರಕರ್ತ ಗೋಪಿ ಸೇರಿದಂತೆ ಅಂತರಾಷ್ಟ್ರೀಯ ಹಿಂದೂ ಪರಿಷತ್ ರಾಷ್ಟ್ರೀಯ ಬಜರಂಗದಳದ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ಕಾಟಿ ಸಮಾಜದ ಮುಖಂಡರು ಮಹಿಳೆಯರು ಮುಂತಾದವರು ಇದ್ದರು.
ವರದಿ:- ಅಯ್ಯಣ್ಣ ಮಾಸ್ಟರ್