Ad imageAd image
- Advertisement -  - Advertisement -  - Advertisement - 

ಹಿಂದೂ ಧರ್ಮ, ಲಿಂಗಾಯಿತ ಧರ್ಮ ಒಂದೇ : ವಚನಾನಂದ ಸ್ವಾಮೀಜಿ 

Bharath Vaibhav
ಹಿಂದೂ ಧರ್ಮ, ಲಿಂಗಾಯಿತ ಧರ್ಮ ಒಂದೇ : ವಚನಾನಂದ ಸ್ವಾಮೀಜಿ 
WhatsApp Group Join Now
Telegram Group Join Now

ವಿಜಯಪುರ: ಹಿಂದೂ ಧರ್ಮ, ಲಿಂಗಾಯಿತ ಧರ್ಮ ಒಂದೇ. ನಾವೆಲ್ಲರೂ ಹಿಂದೂಗಳೇ, ಹಿಂದೂ ಎಂಬುದು ಮಹಾಸಾಗರವಾಗಿದೆ. ಬೌದ್ಧ, ಜೈನ, ಸಿಖ್, ಲಿಂಗಾಯಿತ, ವೈಷ್ಣವ ಎಂಬ ನದಿಗಳಿವೆ ಎಂದು ಹರಿಹರದ ಪಂಚಮಸಾಲಿ ಪೀಠಾಧಿಪತಿ ವಚನಾನಂದ ಸ್ವಾಮೀಜಿ ಹೇಳಿದ್ದಾರೆ.

ವಿಜಯಪುರದ ಜ್ಞಾನ ಯೋಗಾಶ್ರಮದಲ್ಲಿ ಮಾತನಾಡಿದ ಸ್ವಾಮೀಜಿ, ಅನೇಕ ನದಿಗಳು ಹಿಂದೂ ಎಂಬ ಮಹಾಸಾಗರದಲ್ಲಿ ವಿಲೀನವಾಗಿವೆ.

ಶಂಕರಾಚಾರ್ಯರು, ಮಧ್ವಾಚಾರ್ಯರು, ರಾಮಾನುಜಾಚಾರ್ಯರು, ಗುರುನಾನಕರು, ಜ್ಞಾನೇಶ್ವರ ಬಸವಣ್ಣನವರು ಆಯಾ ಕಾಲಘಟ್ಟದಲ್ಲಿ ಅವರವರ ವಿಚಾರಧಾರೆಗಳನ್ನು ಹೇಳಿದ್ದಾರೆ. ವಿಚಾರಧಾರೆಗಳೇ ಧರ್ಮಗಳಾದವು ಎಂದು ಹೇಳಿದ್ದಾರೆ.

ರಾಜ್ಯದಲ್ಲಿ 12ನೇ ಶತಮಾನದಲ್ಲಿ ಬಸವಣ್ಣ ಜಗತ್ತಿಗೆ ಹೊಸದನ್ನು ಕೊಟ್ಟರು. ಜಗಜ್ಯೋತಿ ಬಸವೇಶ್ವರರ ವಿಚಾರಧಾರೆಯನ್ನು ಸೀಮಿತ ಮಾಡಬಾರದು. ಯಾವುದೇ ಮಹಾಪುರುಷರ ಅನುಕರಣೆ ಮಾಡುವವರನ್ನು ಟೀಕಿಸಬಾರದು.

ನಾವೇ ಶ್ರೇಷ್ಠವೆಂದು ಟೀಕಿಸಬಾರದು. ಒಂದು ಧರ್ಮದ ಆಚರಣೆಗಳನ್ನು ಕೀಳಾಗಿ ಕಾಣುವುದು ಒಳಿತಲ್ಲ. ಮತ್ತೊಂದು ತತ್ವಗಳನ್ನು ತುಚ್ಛವಾಗಿ ಕಾಣಬಾರದು. ಎಲ್ಲವೂ ಒಂದೇ, ಹಿಂದೂ ಧರ್ಮ ಲಿಂಗಾಯತ ಧರ್ಮ ಎರಡು ಒಂದೇ ಎಂದು ಸ್ಪಷ್ಟನೆ ನೀಡಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!