Ad imageAd image

ಹಿಂದೂಗಳು ಮತಾಂತರ ಮಾಡಿ :ಚಕ್ರವರ್ತಿ ಸೂಲಿಬೆಲೆ

Bharath Vaibhav
ಹಿಂದೂಗಳು ಮತಾಂತರ ಮಾಡಿ :ಚಕ್ರವರ್ತಿ ಸೂಲಿಬೆಲೆ
WhatsApp Group Join Now
Telegram Group Join Now

ಮಂಗಳೂರು: ಹಿಂದೂಗಳು ಮತಾಂತರ ಮಾಡಿ ಎಂದು ಹೇಳುವ ಮೂಲಕ ಚಿಂತಕ ಚಕ್ರವರ್ತಿ ಸೂಲಿಬೆಲೆ ಇದೀಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಉಜಿರೆಯಲ್ಲಿ ನಡೆದ ರಾಮೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಚಕ್ರವರ್ತಿ ಸೂಲಿಬೆಲೆ, ಹಿಂದೂಗಳು ಧೈರ್ಯವಾಗಿ ಮತಾಂತರ ಇತ್ತೀಚೆಗೆ ಭಜರಂಗದಳದವರು ಸಂಕಲ್ಪ ತಗೊಂಡಿದ್ದಾರೆ. ಹಿಂದೂಗಳ ಸಂಖ್ಯೆ ಹೆಚ್ಚಿಸಲು ಏನು ಐಡಿಯಾ ಇದೆ ಅಂತ ಕೇಳಿದಾಗ ಹೆಚ್ಚು ಮಕ್ಕಳನ್ನು ಮಾಡುವಂತೆ ಮನವಿ ಮಾಡುತ್ತೇವೆ ಎಂದಿದ್ದಾರೆ.

ಆದರೆ ನಮ್ಮ ಜನರು 2-3 ಮಕ್ಕಳನ್ನು ಮಾಡ್ತಾರಾ? ನಮ್ಮ ಜನರಿಗೆ ಅವರ ಮಕ್ಕಳನ್ನು ಪಂಕ್ಚರ್ ಹಾಕಲು ಕಳುಹಿಸಲು ಇಷ್ಟವಿಲ್ಲ. ಅವರಿಗೆ ನಮ್ಮ ಮಕ್ಕಳು ಚನ್ನಾಗಿ ಓದಿ ಡಾಕ್ಟರ್, ಇಂಜಿನಿಯರ್ ಆಗಬೇಕು ಅನ್ನೋದಷ್ಟೇ ಆಸೆ. ಹಾಗಾಗಿ ಓದಿಸೋ ಕೆಪಾಸಿಟಿ ಇಲ್ಲದ ಕಾರಣಕ್ಕೆ ಒಂದು ಸಾಕು, ಎರಡು ಸಾಕು ಅಂತಾರೆ. ಸರ್ಕಾರ ನಮಗಾಗಿ ಮಾಡಿರುವ ಕಾನೂನು ಬಳಸಿಕೊಳ್ಳಬೇಕು.

ಪೊಲೀಸರಿಗೂ ಹೇಳುತ್ತಿದ್ದೇನೆ. ಇದು ಸರ್ಕಾರ ಕೊಟ್ಟ ಕಾನೂನು. ಬಿಜೆಪಿ ಸರ್ಕಾರ ಇದ್ದಾಗ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದಿತು. ಹೊಸ ಸರ್ಕಾರ ಆ ಕಾನೂನು ತೆಗೆದು ಹಾಕಿತು. ಅಂದರೆ ಇದರರ್ಥ ನೀವೂ ಕೂಡ ಮತಾಂತರ ಮಾಡಬಹುದು ಎಂದರು.

ಸರ್ಕಾರವೇ ಮತಾಂತರ ಮಾಡಿ ಎಂದು ಹೇಳಿದೆ. ಹಾಗಿದ್ದಾಗ ನಾವೂ ಮಾಡಬೇಕಲ್ವಾ? ಜಗತ್ತಿನ ಯಾವ ರಾಷ್ಟ್ರದಲ್ಲಿಯೂ ಈ ರೀತಿ ಪರಿಸ್ಥಿತಿ ಇಲ್ಲ. ಹಾಗಾಗಿ ಮತಾಂತರ ಮಾಡಿ. ಜನಸಂಖ್ಯೆ ಜಾಸ್ತಿ ಮಾಡಲು ಸರ್ಕಾರವೇ ಕೊಟ್ಟ ಇಂಥಹ ಕಾನೂನುಗಳು ನಮ್ಮಲ್ಲಿವೆ. ಹಾಗಾಗಿ ಸಂಖ್ಯೆ ವಿಸ್ತರಿಸಲು ಈ ರೀತಿಯಲ್ಲಿ ನಾವು ಕೆಲಸ ಮಾಡಬೇಕು ಎಂದು ಕರೆ ಕೊಟ್ಟಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!