ಮುಂಬೈ: ಜನಸಂಖ್ಯೆಯ ಕುಸಿತವು ಕಳವಳಕಾರಿ ವಿಷಯವಾಗಿದ್ದು, ಹಿಂದೂಗಳು 2-3 ಮಕ್ಕಳು ಪಡೆಯುವುದು ಅವಶ್ಯ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು.
ನಾಗ್ಪುರ್‌ದಲ್ಲಿ ಮಾತನಾಡಿದ ಅವರು, ಒಂದು ಸಮಾಜದ ಜನಸಂಖ್ಯೆ 2.1ಕ್ಕಿಂತ ಕಡಿಮೆಯಾದಾಗ, ಆ ಸಮಾಜವು ಭೂಮಿಯಿಂದ ಕಣ್ಮರೆಯಾಗುತ್ತದೆ ಎಂದು ಆಧುನಿಕ ಜನಸಂಖ್ಯಾ ವಿಜ್ಞಾನವು ಹೇಳುತ್ತದೆ ಎಂದರು.
ಯಾವುದೇ ಸಮಾಜವು 2.1ಕ್ಕಿಂತ ಕೆಳಗೆ ಹೋಗಬಾರದು. ನಮ್ಮ ದೇಶದ ಜನಸಂಖ್ಯಾ ನೀತಿಯನ್ನು 1998 ಅಥವಾ 2002ರಲ್ಲಿ ನಿರ್ಧರಿಸಲಾಯಿತು.
ಅದರಲ್ಲಿ ಸಮಾಜದ ಜನಸಂಖ್ಯೆಯು 2.1 ಕ್ಕಿಂತ ಕಡಿಮೆಯಿರಬಾರದು ಎಂದು ಹೇಳಲಾಗಿದೆ. ದಂಪತಿಗೆ ಎರಡು ಅಥವಾ ಮೂರಕ್ಕಿಂತ ಹೆಚ್ಚು ಮಕ್ಕಳಿರಬೇಕು ಎಂದು ಜನಸಂಖ್ಯೆಯ ವಿಜ್ಞಾನ ಹೇಳುತ್ತದೆ. ಜನಸಂಖ್ಯೆ ಮುಖ್ಯ ಏಕೆಂದರೆ ಸಮಾಜ ಉಳಿಯಬೇಕು ಎಂದು ಹೇಳಿದರು.