Ad imageAd image

ಎಸ್ ಸಿ. ಎಸ್ ಟಿ. ಒಳ ಮೀಸಲಾತಿ ಕಾನೂನು ಬದ್ದ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು.

Bharath Vaibhav
ಎಸ್ ಸಿ. ಎಸ್ ಟಿ. ಒಳ ಮೀಸಲಾತಿ ಕಾನೂನು ಬದ್ದ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು.
WhatsApp Group Join Now
Telegram Group Join Now

ಸಿಂಧನೂರು :-ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳಿಗೆ ನೀಡಲಾಗಿರುವ ಮೀಸಲಾತಿ ಎಸ್ ಸಿ. ಎಸ್ ಟಿ. ಒಳ ಮೀಸಲಾತಿ ನೀಡಲು ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ ಒಳ ಮೀಸಲಾತಿ ಕಾನೂನು ಬದ್ಧ ಎಂದು ಹೇಳುವ ಮೂಲಕ ಐತಿಹಾಸಿಕ ತೀರ್ಪು ಮುಖ್ಯ ನ್ಯಾಯಮೂರ್ತಿ ಚಂದ್ರ ಚೂಡ್. ನೇತೃತ್ವದ ನ್ಯಾಯಮೂರ್ತಿ ಅರ್.ಗವಾಯಿ. ವಿಕ್ರಂ ನಾಥ್. ಬೇಲಾ ಎಂ. ತ್ರಿವೇದಿ. ಪಂಕಜ್ ಮಿಥಲ್. ಮನೋಜ್ ಮಿಶ್ರಾ. ಮತ್ತು ಸತೀಶ್ ಚಂದ್ರ ಶರ್ಮ. ಅವರನ್ನೊಳಗೊಂಡ ಸಂವಿಧಾನ ಪೀಠ ಈ ಮಹತ್ವದ ಆದೇಶ ಪ್ರಕಟಿಸಿದೆ.

ಎಸ್ಸಿ.ಎಸ್‌ಟಿ. ಜನರು ಎದುರಿಸುತ್ತಿರುವ ವ್ಯವಸ್ಥಿತ ತಾರತಮ್ಯದಿಂದಾಗಿ ಮೇಲಕ್ಕೆ ಬರಲು ಸಾಧ್ಯವಾಗುತ್ತಿಲ್ಲ ಸಂವಿಧಾನ 14ನೇ ವಿಧಿ ಜಾತಿಯ ಉಪ- ವರ್ಗಿಕರಣವನ್ನು ಅನುಮತಿಸುತ್ತದೆ ಮೀಸಲಾತಿ ಪಟ್ಟಿಗೆ ಸಮುದಾಯಗಳ ಸೇರ್ಪಡೆ ಅಥವಾ ತೆಗೆಯಲು ತುಷ್ಟಿಕರಣ ರಾಜಕೀಯ ಮಾಡಬಾರದು ಪರಿಶಿಷ್ಟ ಜಾತಿಗಳ ಏಕರೂಪದ ಗುಂಪಲ್ಲಿ ಎಸ್ಸಿಗಳಲ್ಲಿ ಹೆಚ್ಚು ತಾರತಮ್ಯವನ್ನು ಅನುಭವಿಸಿದವರಿಗೆ 15% ಮೀಸಲಾತಿ ಯಲ್ಲಿ ಹೆಚ್ಚಿನ ಅವಕಾಶ ನೀಡಲು ಸರ್ಕಾರಗಳು ಅವರನ್ನು ಉಪ ವರ್ಗೀಕರಿಸಬಹುದು ಎಸ್ಸಿಗಳಲ್ಲಿ ಜಾತಿಗಳು ಉಪ ವರ್ಗೀಕರಣವನ್ನು ಅವರು ತಾರತಮ್ಯದ ಮಟ್ಟವನ್ನು ಆದರಿಸಬೇಕು.

ಸರ್ಕಾರಿ ಉದ್ಯೋಗಗಳ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಅವರ ಪ್ರಾತಿನಿತ್ಯ ಕುರಿತು ಪ್ರಾಯೋಗಿಕ ಡೇಟಾವನ್ನು ಸಂಗ್ರಹಿಸುವ ಮೂಲಕ ರಾಜ್ಯಗಳು ಮಾಡಬಹುದು ಮೀಸಲಾತಿ ಪರವಾಗಿ ದೊಡ್ಡ ಹೋರಾಟ ನಡೆದಿತ್ತು ಅಸಮಾನತೆಗೆ ಒಳಗಾದವರಿಗೆ ಸಮಾನತೆ ಕಲ್ಪಿಸುವ ಈಗ ತೀರ್ಪು ಸಿಕ್ಕಿದೆ ಒಳ ಮೀಸಲಾತಿ ಕಲ್ಪಿಸುವ ಹಕ್ಕನ್ನು ರಾಜ್ಯ ಸರ್ಕಾರಗಳಿಗೆ ನೀಡಿರುವುದು ಸ್ವಾಗತ ರ್ಹ ಎಂದು ಮಾನ್ಯ ಶ್ರೀ ಮಂದಾಕೃಷ್ಣ ಮಾದಿಗ ಎಂ.ಆರ್‌.ಪಿಎಸ್. ಮಾದಿಗ ದಂಡೂರ ರಾಷ್ಟ್ರೀಯ ಅಧ್ಯಕ್ಷರವರು ಸಚಿವರು. ಶಾಸಕರ ನಿಯೋಗದಲ್ಲಿ ತೆಲಂಗಾಣ ಮಾನ್ಯ ಮುಖ್ಯಮಂತ್ರಿಯಾದ ಶ್ರೀ ಎ.ರೇವಂತ್ ರೆಡ್ಡಿ ಯವರನ್ನು ಭೇಟಿಯಾಗಿ ಶೀಘ್ರದಲ್ಲಿ ತೆಲಂಗಾಣ ರಾಜ್ಯದಲ್ಲಿ ಎಬಿಸಿಡಿ ವರ್ಗೀಕರಣ ಒಳ ಮೀಸಲಾತಿಯನ್ನು ಜಾರಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ.

ಇಂದೇ ರವಿವಾರ 01/09/2024 ರಂದು ಕರ್ನಾಟಕದ ಮುಖ್ಯಮಂತ್ರಿಗಳಾದ ಮಾನ್ಯ ಶ್ರೀ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಸುಪ್ರೀಂ ಕೋರ್ಟಿನ ಐತಿಹಾಸಿಕ ತೀರ್ಪಿಗೆ ಅನುಗುಣವಾಗಿ ಕರ್ನಾಟಕ ರಾಜ್ಯದಲ್ಲಿಯೂ ಶೀಘ್ರವಾಗಿ ಒಳ ಮೀಸಲಾತಿ ಜಾರಿ ಮಾಡಬೇಕೆಂದು ಮನವಿ ಮಾಡಲಿದ್ದಾರೆ ಎಂದು ಎಂ ಆರ್ ಪಿ ಎಸ್. ಮಾದಿಗ ದಂಡೋರ ರಾಜ್ಯಾಧ್ಯಕ್ಷರಾದ ಶ್ರೀ ನರಸಪ್ಪ ದಂಡೋರ ತಿಳಿಸಿದ್ದಾರೆ.

ವರದಿ -ಬಸವರಾಜ ಬುಕ್ಕನಹಟ್ಟಿ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!