Ad imageAd image

ವೀರ ಕನ್ನಡಿಗರ ಅವಾಡ೯ ʼಪಡೆದ ಐತಿಹಾಸಿಕ , ಮಹಾಂತೇಶ ಛಲವಾದಿ.

Bharath Vaibhav
ವೀರ ಕನ್ನಡಿಗರ ಅವಾಡ೯ ʼಪಡೆದ ಐತಿಹಾಸಿಕ , ಮಹಾಂತೇಶ ಛಲವಾದಿ.
WhatsApp Group Join Now
Telegram Group Join Now

ಮುದಗಲ್ಲ :- ಕನ್ನಡಿಗರ ಹೆಮ್ಮೆಯ ಚಾನಲ್‌ ಜೀ ಕನ್ನಡ ನ್ಯೂಸ್‌ ವೀರ ಕನ್ನಡಿಗ ಪ್ರಶಸ್ತಿ ಯನ್ನು ಲಿಂಗಸೂರು ತಾಲೂಕಿನ ಮುದಗಲ್ಲ ಪಟ್ಟಣದ ಅಪ್ಪು ವಿಧ್ಯಾದಾಮ ಮುಖ್ಯಸ್ಥರಾದ ಹಾಗೂ ಸಮಾಜ ಸೇವಕ ರಾದ ಹಾಗೂ ಸಾವಿರಾರು ಮಕ್ಕಳಿಗೆ ವಿಧ್ಯಾ ಧಾನ ಮಾಡಿದ ಮಹಾಂತೇಶ ಛಲವಾದಿ ಅವರಿಗೆ ನೀಡಿ ಗೌರವ ಸಲ್ಲಿಸಿದರು

ಅದ್ಧೂರಿಯಾಗಿ ಬೆಂಗಳೂರು ನಗರದ ದಿ ಲಲಿತ್‌ ಅಶೋಕ್‌ ಹೋಟೆಲ್‌ ನಲ್ಲಿ ನೆರವೇರಿತು. ಸಮಾಜದಲ್ಲಿ ಸೋಲನ್ನೇ ಸೋಲಿಸಿ ಗೆಲುವು ಕಂಡ ಅಪ್ರತಿಮ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಪ್ರತಿ ಕ್ಷೇತ್ರದಲ್ಲೂ ಸಾಧನೆ ಮಾಡಿದ ಹಾಗೂ ಪರ ಭಾಷೆಯವರಾಗಿದ್ದರೂ, ಕನ್ನಡಿಗರಿಗೆ ತಮ್ಮ ಸಂಸ್ಥೆಯಲ್ಲಿ ಕೆಲಸ ನೀಡಿದ ಸಾಧಕರಿಗೆ ಪುರಸ್ಕಾರ ನೀಡಲಾಯಿತು.

ಇದರಲ್ಲಿ ಪ್ರಮುಖವಾಗಿ ಕನ್ನಡಕ್ಕಾಗಿ ಹೋರಾಡಿದ ಹಿರಿಯ ನಾಯಕರು, ಹೋರಾಟದಗಾರರು, ಸಮಾಜ ಸೇವಕರು, ಯುವ ಮುಖಂಡರು, ಕನ್ನಡಿಗರ ಕೆಲಸ ನೀಡಿರೋ ಉದ್ಯಮಿಗಳಿಗೆ ಜೀ ಕನ್ನಡ ನ್ಯೂಸ್‌ ವೀರ ಕನ್ನಡಿಗ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಸಮಾಜ ಸೇವಕರ ವಿಭಾಗದಲ್ಲಿ ಮಹಾಂತೇಶ ಛಲವಾದಿ ಅವರಿಗೆ ವೀರ ಕನ್ನಡಿಗರ ಅವಾಡ೯ 2024 ನೀಡಿ ಇವರಿಗೆ ಗೌರವಿಸಲಾಗಿದೆ.

ಈ ಕಾರ್ಯಕ್ರಮಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ, ಸ್ಯಾಂಡಲ್‌ವುಡ್‌ ಸ್ಟಾರ್‌ ನಟರಾದ ಶ್ರೀಮುರಳಿ, ಖ್ಯಾತ ನಿರ್ದೇಶಕ ತರುಣ್‌ ಸುಧೀರ್‌, ನಟಿ ಮೇಘನಾ ರಾಜ್‌ ಭಾಗಿಯಾಗಿದ್ದರು. ಇದೇ ಭಾನುವಾರ (ಆಗಸ್ಟ್‌ 04 ರಂದು) ಸಂಜೆ 6.00 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ಈ ಕಾರ್ಯಕ್ರಮ ಪ್ರಸಾರವಾಗಲಿದೆ ಎಂದು ವೀರ ಕನ್ನಡಿಗರ ಅವಾಡ೯ ಪಡೆದ ಮಹಾಂತೇಶ ಛಲವಾದಿ ಪತ್ರಿಕೆ ಮುಖಾಂತರ ಮುದಗಲ್ಲ ಜನತೆಗೆ ಮನವಿ ಮಾಡಿದರು.

ವರದಿ:- ಮಂಜುನಾಥ ಕುಂಬಾರ     

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!