ಬಾಗಲಕೋಟೆ : ಇತಿಹಾಸ ಪ್ರಸಿದ್ಧ ಬಾದಾಮಿ ಬನಶಂಕರಿ ಜಾತ್ರೆಯಲ್ಲಿ ರಾಜಾರೋಷವಾಗಿ ಮುಖ್ಯ ರಸ್ತೆಯಲ್ಲೆ ಜೂಜು ಅಡ್ಡಾ ಕಣ್ಣಿಗೆ ಕಂಡರೂ ಪೊಲೀಸರು ಗಪ್ ಚುಪ್, ಯಾರು ಕೊಟ್ಟರು ಪರವಾನಿಗೆ ಇವರಿಗೆ ಹೇಳಬೇಕು ತಾಲೂಕಾ ದಂಡಾಧಿಕಾರಿ ಮಧುಕರ್ ಸಾಹೇಬರೇ.
ಇತಿಹಾಸ ಪ್ರಸಿದ್ಧ ಬಾದಾಮಿ ಬನಶಂಕರಿ ದೇವಿ ಜಾತ್ರೆ ನಿನ್ನೆಯಷ್ಟೇ ರಾಥೋತ್ಸವ ಮುಗಿದಿದ್ದು ಲಕ್ಷಾoತರ ಭಕ್ತರು ಬರುವ ಒಂದು ತಿಂಗಳು ನಡೆಯುವ ಉತ್ತರ ಕರ್ನಾಟಕದ ಅತಿ ದೊಡ್ಡ ಜಾತ್ರೆ ಇದು. ನೂರಾರು ಸಂಖ್ಯೆಯಲ್ಲಿ ಭಧ್ರತೆಗೆ ಪೊಲೀಸರು ಇಲ್ಲಿ ನಿಯೋಜನೆಗೊಂಡು ಕರ್ತವ್ಯ ನಿರ್ವಹಿಸುತ್ತಿದ್ದರೂ ಕೂಡ ಬಾದಾಮಿಯಿಂದ ಬರುವ ಬನಶಂಕರಿ ದೇವಸ್ಥಾನಕ್ಕೆ ಎಂಟ್ರಿ ಆಗುವ ಮುಖ್ಯ ರಸ್ತೆಯಲ್ಲಿಯೇ ಋಷಿಮರ್ಜಿ ಎಂಬ ಹೆಸರಿನೊಂದಿಗೆ ಒಂದು ಪೆಂಡಾಲ್ ಹಾಕಿಕೊಂಡು 50 ರೂಪಾಯಿಯಿಂದ 1000 ರೂಪಾಯಿವರೆಗೆ ಜೂಜು ಆಡುತ್ತಿರುವ ಜೂಜು ದಂಧೆ ನಡೆಯುತ್ತಿದ್ದರೂ ಪೊಲೀಸರು ಅದೇ ರಸ್ತೆಯಲ್ಲಿ ಹೋಗುತ್ತಿದ್ದರೂ ನೋಡಿಯೂ ನೋಡದಂತೆ ಹೋಗುತ್ತಿರುವುದು ಪೊಲೀಸ್ ಕರ್ತವ್ಯ ಲೋಪವನ್ನು ಎತ್ತಿ ತೋರಿಸುತ್ತಿದೆ ಎನ್ನಬಹುದು.
ಬಾದಾಮಿ ಶಾಸಕರಾದ ಭೀಮಸೇನ ಚಿಮ್ಮನಕಟ್ಟಿಯವರೇ ಸ್ವಲ್ಪ ಈ ಸುದ್ದಿ ನೋಡಿ ಇತಿಹಾಸ ಪ್ರಸಿದ್ಧ ಜಾತ್ರೆಯಲ್ಲಿ ರಾಜಾರೋಷವಾಗಿ ನಡೆಯುತ್ತಿದೆ ಜೂಜು ದಂಧೆ.
ಇಲ್ಲಿ ಸೋತು ಹಣ ಕಳೆದುಕೊಂಡವರೇ ಜಾತ್ರೆಯಲ್ಲಿ ಭಕ್ತರ ಹಣ ಲೂಟಿ ಮಾಡುವುದನ್ನು ತಳ್ಳಿಹಾಕುವಂತಿಲ್ಲ ಎನ್ನಬಹುದು. ಹಾಗಾದರೆ ಇವರಿಗೆ ಟೆಂಟ್ ಹಾಕಲು ಪರವಾನಿಗೆ ಕೊಟ್ಟವರು ಯಾರು, ಅಷ್ಟಕ್ಕೂ ಪೊಲೀಸರು ಯಾಕೆ ಇವರಿಗೆ ತಾಕೀತು ಮಾಡಿಲ್ಲ, ಮಾನ್ಯ ಬಾದಾಮಿ ತಾಲೂಕಾ ದಂದಾಧಿಕಾರಿಗಳು ಇತ್ತ ಕಡೆ ಕಣ್ತೆರೆದು ನೋಡಿಲ್ಲವಾ, ಇದರಲ್ಲಿ ಅಧಿಕಾರಿಗಳಿಗೆ ಪೊಲೀಸರಿಗೆ ಕೈ ಬಿಸಿ ಮಾಡಿದ್ದಾರಾ ಹೇಗೆ ಎನ್ನುವ ಹತ್ತು ಹಲವು ಪ್ರಶ್ನೆಗಳು ಈಗ ಎದ್ದಿವೆ.
ತಾಲೂಕಾ ದಂಡಧಿಕಾರಿ ಮಧುಕರ್ ಅವರು ಜಾತ್ರೆಯಲ್ಲಿ ಏನು ನಡಿತಾ ಇದೆ ಎನ್ನುವುದನ್ನು ಸ್ವಲ್ಪ ಕಣ್ತೆರೆದು ನೋಡಲಿ, ಈ ಜೂಜಿನಿಂದ ಜಾತ್ರೆಗೆ ಬಂದವರು ಜೇಬು ಖಾಲಿ ಮಾಡಿಕೊಂಡು ಮತ್ತೊಬ್ಬರ ಜೇಬು ಹೊಡೆಯೋ ಹಾಗೆ ಪೊಲೀಸರೇ ದಾರಿ ಮಾಡಿ ಕೊಟ್ಟ ಹಾಗೆ ಆಗುತ್ತದೆ ಈ ಅವ್ಯವಸ್ಥೆ ನೋಡ್ತಾ ಇದ್ದರೆ ಅಷ್ಟರ ಮಟ್ಟಿಗೆ ರಾಜಾರೋಷವಾಗಿ ಮುಖ್ಯ ರಸ್ತೆಯಲ್ಲಿಯೇ ಬೇರೆ ಭಾಷೆ ಮಾತನಾಡುವ ಗ್ಯಾಂಗ್ ಬಂದು ಇಲ್ಲಿ ಜೂಜು ಅಡ್ಡ ನಡಸ್ತಾ ಇದ್ದರೂ ಇಲ್ಲಿ ಪೊಲೀಸ್ ವ್ಯವಸ್ಥೆ ಎಷ್ಟರ ಮಟ್ಟಿಗೆ ಹದಗೆಟ್ಟಿದೆ ಎನ್ನುವುದನ್ನು ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಹಾಗೂ ಮಾನ್ಯ ಜಿಲ್ಲಾಧಿಕಾರಿಗಳು ಇತ್ತ ಕಡೆ ಕಣ್ತೆರೆದು ನೋಡಬೇಕು ಜಾತ್ರೆಯಲ್ಲೂ ಇಂತಹ ಜೂಜು ನಡೆಯುತ್ತೆ ಎಂದರೆ ಎಂತಹ ವಿಪರ್ಯಾಸದ ಸಂಗತಿ ಅಂತ ಅವ್ಯವಸ್ಥೆ ಬಗ್ಗೆ ನೋಡಿದರೆ ತಿಳಿಯುತ್ತದೆ.
ವರದಿ:- ರಾಜೇಶ್. ಎಸ್. ದೇಸಾಯಿ