ಸೇಡಂ: ತಾಲೂಕಿನಾದ್ಯಂತ ಈ ವರ್ಷ ಉತ್ತಮ ರೀತಿಯ ಮುಂಗಾರು ಮಳೆ ಆಗಿರುವುದರಿಂದ ರೈತರು ಬಿತ್ತನೆ ಮಾಡಲು ಪ್ರಾರಂಭಿಸಿರುತ್ತಾರೆ. ಆದರೆ ಸೇಡಂ ತಾಲೂಕಿನ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಇಲ್ಲಿಯವರೆಗೂ ಯಾವುದೇ ಬಿತ್ತನೆ ಬೀಜಗಳನ್ನು ಇನ್ನೂ ವಿತರಣೆ ಮಾಡಲಾಗುತ್ತಿಲ್ಲ ಇದರಿಂದ ತಾಲೂಕಿನ ಎಲ್ಲಾ ರೈತರು ಖಾಸಗಿ ಅಂಗಡಿಗಳಲ್ಲಿ ಹೆಚ್ಚಿನ ಬೆಲೆಗೆ ಬೀಜಗಳನ್ನು ಖರೀದಿ ಮಾಡುತ್ತಿದ್ದಾರೆ.
ರೈತ ಸಂಪರ್ಕ ಕೇಂದ್ರಗಳಿದ್ದರೂ ಕೂಡ ರೈತರಿಗೆ ಉಪಯೋಗವಾಗುತ್ತಿಲ್ಲ ಆದ್ದರಿಂದ ತಾಲೂಕ ಕೃಷಿ ಅಧಿಕಾರಿಗಳು ಈ ವಿಷಯ ಕುರಿತು ಕ್ರಮ ಕೈಗೊಳ್ಳಬೇಕು ಹಾಗೂ ರೈತರಿಗೆ ಬಿತ್ತನೆ ಬೀಜ ನೀಡಿ ಅನುಕೂಲ ಮಾಡಿಕೊಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ತಾಲೂಕು ಅಧ್ಯಕ್ಷರಾದ ಅನಿಲ್ ಪಾಟೀಲ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ತಾಲೂಕ ಖಜಾಂಚಿ ನರಹರಿ, ಉಪ ಕಾರ್ಯದರ್ಶಿ ಹುಸೇನಪ್ಪ ಮೋತಕಪಲ್ಲಿ, ಮುಧೋಳ್ ಹೋಬಳಿ ಅಧ್ಯಕ್ಷರಾದ ಸಾಬಪ್ಪ, ಉಪಾಧ್ಯಕ್ಷರಾದ ಕಾಶಪ್ಪ ಮೆದಕ್, ಶಾಂತಪ್ಪ ಕೊಲ್ಕುಂದ ಸೇರಿದಂತೆ ರೈತ ಮುಖಂಡರು ಭಾಗಿಯಾಗಿದ್ದರು.
ವರದಿ :ವೆಂಕಟಪ್ಪ ಕೆ ಸುಗ್ಗಾಲ್




