Ad imageAd image

ಪ್ರಧಾನಿ ನರೇಂದ್ರ ಮೋದಿ ಜನರಲ್ಲಿ ದ್ವೇಷ ಹರಡುವ ಭಾಶಣ ಮಾಡುತ್ತಿದ್ದಾರೆ:- ಎಚ್ ಕೆ ಪಾಟಿಲ್

Bharath Vaibhav
WhatsApp Group Join Now
Telegram Group Join Now

ಹುಬ್ಬಳ್ಳಿ:- ದೇಶದ ಪ್ರಧಾನಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರಲ್ಲಿ ದ್ವೇಷ ಹರಡುವ ಭಾಷಣವನ್ನು ಮಾಡುತ್ತಿದ್ದು, ಇದನ್ನು ಚುನಾವಣೆ ಆಯೋಗ ಗಂಭೀರವಾಗಿ ಪರಿಗಣಿಸಿ ಚುನಾವಣೆ ಪ್ರಕ್ರಿಯೆಯಿಂದ ಮೋದಿ ಅವರನ್ನು ವಜಾಗೊಳಿಸಬೇಕೆಂದು ಸಚಿವ ಹೆಚ್.ಕೆ.ಪಾಟೀಲ್ ಆಗ್ರಹಿಸಿದ್ದಾರೆ.

ನಗರದಲ್ಲಿಂದು ಮಾತನಾಡಿದ ಅವರು, ರಾಷ್ಟ್ರದ ಪ್ರಜಾಪ್ರಭುತ್ವದ ಕುರಿತು ಮೋದಿ ಅವರು ಬಳಸುತ್ತಿರುವ ಶಬ್ದ, ಭಾಷೆಗಳನ್ನು ನೋಡಿದರೇ ಓರ್ವ ಪಾಲಿಕೆ ಸದಸ್ಯ ಕೂಡಾ ಅಷ್ಟು ಕೆಳಮಟ್ಟದ ಮಾತುಗಳನ್ನು ಹೇಳುವುದಿಲ್ಲ, ಸಮಾಜದಲ್ಲಿ ದ್ವೇಷ ಹುಟ್ಟಿಸುವ ಮಾತುಗಳನ್ನು ಯಾರು ಈವರೆಗೆ ಆಡಿಲ್ಲ, ಆದರೆ ಮೋದಿಯವರು ಧರ್ಮಗಳ ಹೆಸರಿನಲ್ಲಿ ಧರ್ಮಿಯರ ಹೆಸರಿನಲ್ಲಿ, ಭಾಷಾ ಪ್ರಯೋಗ ಮಾಡಿದ್ದಾರೆ.

ಭಾಷಣದಲ್ಲಿ ಮುಸ್ಲಿಂ ಸಮೂದಾಯವನ್ನೇ ಗುರಿಯಾಗಿಸಿಕೊಂಡು ದ್ವೇಷದ ಮಾತು ಆಡಿದ್ದಾರೆ. ಈ ಎಲ್ಲ ನೋಡಿದಾಗ ಚುನಾವಣೆ ಆಯೋಗ ಹೊರಡಿಸಿದ ನೀತಿ ಸಂಹಿತೆ ಸಂಪೂರ್ಣವಾಗಿ ಉಲ್ಲಂಘನೆ ಆಗಿದ್ದು, ಈ ಬಗ್ಗೆ ಚುನಾವಣೆ ಆಯೋಗ ಸುಪೋಟೋ ಪ್ರಕರಣವನ್ನು ದಾಖಲಿಸಿಕೊಂಡು ನರೇಂದ್ರ ಮೋದಿ ಅವರನ್ನು ಚುನಾವಣೆ ಪ್ರಕ್ರಿಯೆಯಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿದರು.

ನರೇಂದ್ರ ಮೋದಿ ಅವರು ಚುನಾವಣೆ ಸಂದರ್ಭದಲ್ಲಿ ಹಸಿ ಸುಳ್ಳುಗಳನ್ನು ಹೇಳುತ್ತಿದ್ದಾರೆ. ಇದರಿಂದ ಅವರ ಅಭಿಮಾನಿಗಳೇ ತಲೆ ತಲೆ ಬಡೆದುಕೊಳ್ಳುವ ವಾತಾವರಣ ನಿರ್ಮಾಣ ಮಾಡಿದ್ದಾರೆ. 135 ವರ್ಷ ಇತಿಹಾಳಯುಳ್ಳ ಕಾಂಗ್ರೆಸ್ ಪಕ್ಷ ಜನರ ಆಸ್ತಿ, ತಾಳಿ ಕಿತ್ತುಕೊಳ್ಳುತ್ತದೆ ಎಂದು ಜನರಲ್ಲಿ ಗೊಂದಲ ಉಂಟು ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಯಾವತ್ತೂ ಗೂಂಡಾಗಿರಿ ಮಾಡಿಲ್ಲ, ತಾಳಿ ಭಾಗ್ಯ ಕೊಟ್ಟಿದೆ. ಗ್ಯಾರಂಟಿ ಮೂಲಕ ಜನರಿಗೆ ಬದುಕು ಕಟ್ಟಿಕೊಟ್ಟಿದ್ದೇವೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

ಇದೀಗ ನರೇಂದ್ರ ಮೋದಿ ಅವರು ಭಾರತ ಮಾತೆಯ ಆಭರಣಗಳನ್ನು ಕಿತ್ತುಕೊಂಡು ಬಡವರಿಗೆ ಕೊಡುವ ಕೆಲಸ ಮಾಡಿದ್ದಾರೆ. ಅವರು ಮಾತನಾಡುವ ನೈತಿಕತೆ ಹಕ್ಕನ್ನು ಕಳೆದುಕೊಂಡಿದ್ದಾರೆ. ಈ ದಿಸೆಯಲ್ಲಿ ಅವರನ್ನು ಚುನಾವಣೆ ಪ್ರಕ್ರಿಯೆಯಿಂದ ತೆಗೆದು ಹಾಕಬೇಕು. ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ಪ್ರಸಾದ್ ಅಬ್ಬಯ್ಯ, ಮಾಜಿ ಸಚಿವ ಎ.ಎಮ್.ಹಿಂಡಸಗಿರಿ, ಮುಖಂಡರಾದ ಅಲ್ತಾಪ್ ಹಳ್ಳೂರು, ಹೆಚ್.ಎಫ್.ಜಕ್ಕಪ್ಪನವರ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.

 ವರದಿ:- ಸುಧೀರ್ ಕುಲಕರ್ಣಿ 

WhatsApp Group Join Now
Telegram Group Join Now
Share This Article
error: Content is protected !!