ಬೆಂಗಳೂರು : ಹೆಚ್ ಎಂಪಿವಿ ಸೋಂಕು ರಾಜ್ಯಕ್ಕೆ ಎಂಟ್ರಿ ಕೊಟ್ಟಿದ್ದು, ಬೆಂಗಳೂರಿನಲ್ಲಿ ಎಂಟು ತಿಂಗಳ ಮಗುವಿಗೆ ವೈರಸ್ ಅಂಟಿರುವುದು ಧೃಡವಾಗಿದೆ.
ಜ್ವರ ಬಂದ ಹಿನ್ನೆಲೆಯಲ್ಲಿ ಮಗುವಿಗೆ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಈ ವೇಳೆ ಮಗುವಿಗೆ ರಕ್ತ ಪರೀಕ್ಷೆ ಮಾಡಿಸಿದಾಗ ಹೆಚ್ ಎಂಪಿವಿ ವೈರಸ್ ಇರುವುದು ಧೃಡವಾಗಿದೆ.
ಇನ್ನು HMPV ಸೋಂಕಿನ ಲಕ್ಷಣಗಳು ನೋಡುವುದಾದ್ದರೇ..
* ಕೆಮ್ಮು
* ಜ್ವರ
* ಮೂಗು ಕಟ್ಟುವಿಕೆ
* ಉಸಿರಾಟದ ತೊಂದರೆ
* ದೇಹದಲ್ಲಿ ನೋವು
* ತಲೆನೋವು
ಯಾರಿಗೆ ಹೆಚ್ಚು ಅಪಾಯ..?!
* ಶಿಶುಗಳು ಮತ್ತು ಚಿಕ್ಕ ಮಕ್ಕಳು
* ಹಿರಿಯ ನಾಗರಿಕರು
* ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿರುವವರು
* ರೋಗನಿರೋಧಕ ಶಕ್ತಿ ಕಡಿಮೆ ಇರುವವರು