ಸಿಂಧನೂರು: ಅ.8 ವಿಚಾರಣೆಯೊಂದರಲ್ಲಿ ದೇಶದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಬಿ. ಆರ್. ಗವಾಯಿ ಅವರ ಮೇಲೆ ವಕೀಲ ಕಿಶೋರ ರಾಕೇಶ್ ಎನ್ನುವ ಮತಾಂಧ ಶೂ.. ಎಸೆದು ಅಪಮಾನ ಮಾಡಿರುವುದು ಇದು ಕೇವಲ ನ್ಯಾಯಾಧೀಶರಿಗೆ ಮಾಡಿರುವ ಅಪಮಾನವಷ್ಟೇ ಅಲ್ಲದೆ ಇಡೀ ನ್ಯಾಯಾಂಗ ವ್ಯವಸ್ಥೆಗೆ ಮತ್ತು ಪ್ರಜಾಪ್ರಭುತ್ವವ ವ್ಯವಸ್ಥೆಗೆ ಮತ್ತು ಇಡೀ ದೇಶಕ್ಕೆ ಮಾಡಿದ ದೊಡ್ಡ ಅಪಮಾನವಾಗಿದೆ.
ದೇಶದಲ್ಲಿ ಇಂತಹ ಘಟನೆಗಳು ಜರುಗುವುದಕ್ಕೆ ಕಾರಣ,ತಳ ಸಮುದಾಯಗಳಿಂದ ಬಂದಂತಹ ಬುದ್ಧಿಜೀವಿಗಳು ಮತ್ತು ದಕ್ಷ ನ್ಯಾಯಾಧೀಶರಾದ ಗವಾಯಿಯವರು ಇಂದು ದೇಶದ ಅತ್ಯುನ್ನತ ಹುದ್ದೆಯಾದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ಕಾರಣವಾಗಿ ಇದನ್ನು ಸಹಿಸದ ಜಾತಿವಾದಿಗಳು ತಮ್ಮ ಮನಸ್ಥಿತಿಯಲ್ಲಿ ಜಾತಿಯ ದುರಹಂಕಾರವನ್ನು ತುಂಬಿಕೊಂಡು ನ್ಯಾಯಾಧೀಶರಿಗೆ ಅಪಮಾನ ಮಾಡಿರುವುದು ಖಂಡನೀಯ.
ಸಂವಿಧಾನ ವಿರೋಧಿ, ಸಮಾಜಘಾತಕ ವ್ಯಕ್ತಿತ್ವವುಳ್ಳ ಈ ವ್ಯಕ್ತಿಗೆ ಕಠಿಣ ಶಿಕ್ಷೆ ವಿಧಿಸಿ ನ್ಯಾಯಾಲಯದ ಮೌಲ್ಯವನ್ನು ಎತ್ತಿ ಹಿಡಿದು, ಮುಂದೆಂದೂ ಇಂತಹ ಘಟನೆಗಳು ಮರುಕಳಿಸಿದಂತೆ ಸರ್ಕಾರ ಕ್ರಮವಹಿಸಬೇಕೆಂದು ಈ ಮೂಲಕ ಒತ್ತಾಯಿಸಿದ ಹಿರಿಯ ಹೋರಾಟಗಾರ ಎಚ್ ಎನ್. ಬಡಿಗೇರ್.
ಮೌನೇಶ್ ಜಾಲವಾಡಗಿ. ಆಲಂಬಾಷ ಬೂದಿವಾಳ. ದುರುಗೇಶ್ ಕಲ್ಮಂಗಿ ಯವರ ಒತ್ತಾಯವಾಗಿದೆ.
ವರದಿ : ಬಸವರಾಜ ಬುಕ್ಕನಹಟ್ಟಿ.




