ಬೆಂಗಳೂರು: –ಪೀಣ್ಯ ದಾಸರಹಳ್ಳಿ ಈಗಿನ ಪರಿಸ್ಥಿತಿಯಲ್ಲಿ ಯೋಗ ಅವಶ್ಯಕತೆ ಇದೆ ಎಕೆಂದರೆ ಮನುಷ್ಯನಿಗೆ ರೋಗಗಳು ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಿವೆ ಆ ಒಂದು ದೃಷ್ಟಿಯಿಂದ ಮನುಷ್ಯನಿಗೆ ಗಾಳಿ ಬೆಳಕು ನೀರು ಎಷ್ಟು ಮುಖ್ಯವೋ ಅಷ್ಟೇ ಯೋಗವು ಮುಖ್ಯ ಎಂದು ನಿಸರ್ಗ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಹಾಗೂ ಮಾಜಿ ಪಾಲಿಕೆ ಸದಸ್ಯ ಮತ್ತು ತೋಟಗಾರಿಕೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎಚ್ ಎನ್ ಗಂಗಾಧರ್ ಹೇಳಿದರು.
ಹೆಗ್ಗನಹಳ್ಳಿಯ ನಿಸರ್ಗ ಶಾಲಾ ಆವರಣದಲ್ಲಿ ಶಾಲಾ ಮುಖ್ಯೋಪಾಧ್ಯಾಯರು ಸರ್ವ ಶಿಕ್ಷಕಿ ಆಯೋಜಿಸಿದ್ದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಚಾನಲ್ ನೀಡಿ ಮಾನವನ ಬದುಕಿಗೆ ಯೋಗವು ಜೀವನ ಮಾನಸಿಕ, ಆಧ್ಯಾತ್ಮಿಕ ಮತ್ತು ದೈಹಿಕ ಮಾರ್ಗದ ಮೂಲಕ ಬದುಕುವ ಕಲೆ ಯೋಗ ವಾಗಿದೆ ಎಂದು ಎಚ್ ಎನ್ ಗಂಗಾಧರ್ ಮಕ್ಕಳ ಯೋಗಾಸನ ವೀಕ್ಷಿಸಿ ಅವರು ಮಾತನಾಡಿದರು.
ಮಕ್ಕಳಿಂದ ಯೋಗ ಪ್ರದರ್ಶನ ಶಾಲಾ ದೈಹಿಕ ಶಿಕ್ಷಕ ಚಂದ್ರಶೇಖರ್ ನಡೆಸಿಕೊಟ್ಟರು.ಈ ಸಂದರ್ಭದಲ್ಲಿ ನಿಸರ್ಗ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಚ್ ಎನ್ ಗಂಗಾಧರ್ ಅವರ ಧರ್ಮ ಪತ್ನಿ ಶ್ರೀಮತಿ ಗೀತಾ ಗಂಗಾಧರ್, ಶಾಲಾ ಮುಖ್ಯೋಪಾಧ್ಯಾಯ ರು ಶಿಕ್ಷಕ ಶಿಕ್ಷಕಿಯರು ವಿದ್ಯಾರ್ಥಿಗಳು ಪೋಷಕರು ಸಮಸ್ತ ನಾಗರಿಕರು ಮುಂತಾದವರು ಉಪಸ್ಥಿತರಿದ್ದರು.
ವರದಿ:- ಅಯ್ಯಣ್ಣ ಮಾಸ್ಟರ್