ಮುದಗಲ್ಲ :- ಹೋಳಿಹುಣ್ಣಿಮೆ ಹಾಗೂ ರಂಜಾನ್ ಹಬ್ಬದ ಪೂರ್ವ ಭಾವಿ ಸಭೆ ಮುದಗಲ್ಲ ಪೊಲೀಸ್ ಠಾಣೆಯಲ್ಲಿ ಮಸ್ಕಿ ಸಿಪಿಐ ಬಾಲಚಂದ್ರ ಅಧ್ಯಕ್ಷತೆಯಲ್ಲಿ ನಡೆಯಿತು.
ಮುದಗಲ್ಲ : ಪೊಲೀಸ್ ಠಾಣಾ ವ್ಯಾಪ್ತಿಯ ಸುತ್ತಮುತ್ತಲಿನ ಹಳ್ಳಿ ಪಟ್ಟಣ ಹಾಗೂ ಪಟ್ಟಣದಲ್ಲಿ ಪ್ರತಿವರ್ಷದಂತೆ ಈ ವರ್ಷ ಕೂಡಾ ಶಾಂತಿಯುತವಾಗಿ ಹಬ್ಬ ಆಚರಣೆ ಮಾಡಲು ಅಧಿಕಾರಿಗಳು ಸೂಚನೆ ನೀಡಿದರು
ಮಸ್ಕಿ ಸಿಪಿಐ ಬಾಲಚಂದ್ರ ಮಾತನಾಡಿ ‘ಹಬ್ಬದ ನೆಪದಲ್ಲಿ ಕಾನೂನು ಮೀರುವವರ ವಿರುದ್ಧ ಕ್ರಮ ಜರುಗಿಸಲಾಗುವುದು. ಹೋಳಿ ಹುಣ್ಣಿಮೆ ಮತ್ತು ರಂಜಾನ್ ಹಬ್ಬಗಳನ್ನು ಎಲ್ಲರೂ ಸೇರಿ ಶಾಂತ ರೀತಿಯಿಂದ ಆಚರಿಸಬೇಕು’ ಎಂದು ಹೇಳಿದರು.
‘ಈಚೆಗೆ ಸೈಬರ್ ಅಪರಾಧಗಳು ಹೆಚ್ಚುತ್ತಿವೆ. ಅಪರಿಚಿತರು ಪಾಸ್‍ವರ್ಡ್ ಮತ್ತು ಒಟಿಪಿ ಕೇಳಿದಾಗ ಹಂಚಿಕೊಳ್ಳಬಾರದು. ಫೇಸ್‍ಬುಕ್ ಮತ್ತು ವಾಟ್ಸ್‌ಆ್ಯಪ್‌ಗಳಲ್ಲಿ ಧಾರ್ಮಿಕ ಭಾವನೆ ಕೆರಳಿಸುವ ವಿಷಯಗಳನ್ನು ಪೋಸ್ಟ್ ಮಾಡಬಾರದು. ಎಚ್ಚರಿಕೆ ವಹಿಸಬೇಕು’ ಎಂದರು.
ಹಿಂದಿನಿಂದಲೂ ಪಟ್ಟಣದಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಎಲ್ಲ ಹಬ್ಬಗಳನ್ನು ಶಾಂತಿ ಮತ್ತು ಸೌಹಾರ್ಧತೆಯಿಂದ ನಡೆಸಿಕೊಂಡು ಬರುತ್ತಿದ್ದೇವೆ. ರಂಗಪಂಚಮಿಯಂದು ರಾಸಾಯನಿಕ ಬಣ್ಣ ಬಳಸದೆ ಒಣ ಬಣ್ಣ ಬಳಸುವುದು ಸೂಕ್ತ. ಈ ನಿಟ್ಟಿನಲ್ಲಿ ಪುರಸಭೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು’ ಎಂದರು.
ಈ ಸಂದರ್ಭದಲ್ಲಿ ಗುಂಡಪ್ಪ ಗಂಗಾವತಿ ಹಾಗೂ ಊರಿನ ಮುಖಂಡರು ಮಾತನಾಡಿದ್ದರು.
ಈ ಸಂದರ್ಭದಲ್ಲಿ ಪಿಎಸ್ಐ ವೆಂಕಟೇಶ ಪುರಸಭೆ ಸಿಬ್ಬಂದಿ ನಿಸಾರ್ ಅಹಮದ್, ಗುರು ಬಸಪ್ಪ ಸಜ್ಜನ್, ಮಲ್ಲಪ್ಪ ಹೂಗಾರ , ಸಂಗಪ್ಪ ಹಿರೇಮನಿ, ಕೃಷ್ಣ ಚಲುವಾದಿ, ವಿನೋದ್ , ಹುಲಗಪ್ಪ ಚಲುವಾದಿ ,ಇದ್ದರು.
ವರದಿ:- ಮಂಜುನಾಥ ಕುಂಬಾರ