ಹಾವೇರಿ: ಶಿಗ್ಗಾಂವಿ ತಾಲೂಕ್ ದುಂಡಸಿ ಗ್ರಾಮದ ಅ.ಮ.ಕೊಪ್ಪ ದಿಂದ 3ನೇವರುಷದ
ಶ್ರೀ ಕ್ಷೇತ್ರ ಹೊಂಬುಜಿ ಪದ್ಮಾವತಿ ದೇವಿಯ ದರ್ಶನ ಪಡೆಯಲಿಕ್ಕೆ ದಿಗಂಬರ ಜೈನ ಸಮುದಾಯದ 50 ಭಕ್ತರಿಂದ ಪಾದ ಯಾತ್ರೆ ಮೂಲಕ ದರ್ಶನ ಮಾಡಲಾಯಿತು
ಶ್ರೀ ಪದ್ಮಾವತಿ ದೇವಿಯ ದರ್ಶನಕ್ಕೆ ಪ್ರತಿ ವರುಷದಂತೆ ಈ ವರುಷವು ಪಾದ ಯಾತ್ರೆ ಮೂಲಕ ದೇವಿಯ ದರ್ಶನ ಪಡೆಯಲಿಕ್ಕೆ ಶಿಗ್ಗಾoವ ತಾಲ್ಲೂಕಿನ ದುಂಡಸಿ ಅ. ಮ. ಕೊಪ್ಪದಿಂದ ಜೈನ ದಿಗಂಬರ 50 ಜನ ಬಕ್ತಾದಿಗಳು ಹೊರಟಿರುವುದು ವಿಸ್ಮಯವಾಗಿದೆ.
ದುಂಡಸಿಯಿಂದ ಕೊಣನಕೇರಿ ಮಾರ್ಗವಾಗಿ ಹಾನಗಲ್ ತಲುಪಿ ಹಾನಗಲದಿಂದ ಆನವಟ್ಟಿ ತಲುಪಿ ಆನವಟ್ಟಿಯಿoದ ಸಿರಾಳಕೊಪ್ಪ ಮಾರ್ಗವಾಗಿ ಶ್ರೀ ಕ್ಷೇತ್ರ ಹೊoಬುಜಿ ಒಟ್ಟು 160.ಕಿಲೋಮೀಟರ ನಾಲ್ಕು ದಿನ ಕಾಲ್ನಡುಗಿಂದ ಶ್ರೀದೇವಿ ಪದ್ಮಾವತಿ ದರ್ಶನ ಪಡೆದು ದೇವಿಯ ಕೃಪೆಗೆ ಪಾತ್ರರಾಗಿ ಬರುತ್ತಾರೆoದು ದೇವಿ ಬಕ್ತರಾದ ಪ್ರಶಾಂತ್ ಬಿಸಟ್ಟಿ ಪತ್ರಿಕೆಗೆ ಮಾಹಿತಿ ನೀಡಿದರು. ನಂತರ ರಸ್ತೆಯ ಮಾರ್ಗ ಮಧ್ಯದಲ್ಲಿ ದೇವಿಯ ಭಕ್ತಾದಿಗಳು ಊಟದ ವ್ಯವಸ್ಥೆ ಮಾಡಿರುತ್ತಾರೆ ಶ್ರದ್ಧೆ ಭಕ್ತಿಯಿಂದ ದೇವಿಯ ದರ್ಶನ ಯಾರ ಪಡಿಯುತ್ತಾರೋ ಆ ದೇವಿಯ ಆಶೀರ್ವಾದ ಸದಾ ಅವರ ಮೇಲೆ ಇರುತ್ತದೆ ಎಲ್ಲ ಧರ್ಮದ ಭಕ್ತಾದಿಗಳು ಭಾಗವಹಿಸಬೇಕೆಂದು ವಿನಂತಿಸಿಕೊಳ್ಳುತ್ತೇವೆ ಎಂದು ಬ್ರಹ್ಮಾನಂದ ಪುಟ್ಟಣ್ಣವರ ಹೇಳಿದರು.
ವರದಿ: ರಮೇಶ್ ತಾಳಿಕೋಟಿ