ಚಿತ್ರದುರ್ಗ: ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ ಎಂದು ಮನನೊಂದು ಹೋಂಗಾರ್ಡ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿತ್ರದುರ್ಗ ಜಿಲ್ಲೆಯ ಜೆಬಿ ಹಳ್ಳಿಯಲ್ಲಿ ನಡೆದಿದೆ.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ಜೆ ಬಿ ಹಳ್ಳಿಯಲ್ಲಿ ಹೋಂಗಾರ್ಡ್ ತಿರುಮಲ (31) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮನೆಯಲ್ಲಿ ನೇಣಿಗೆ ಹೋಂಗಾರ್ಡ್ ತಿರುಮಲ ಶರಣಾಗಿದ್ದಾರೆ.
ಮೂರು ಕಡೆಯಲ್ಲಿ ತಿರುಮಲ ಹೆಣ್ಣು ನೋಡಿಕೊಂಡು ಬಂದಿದ್ದರು. ಅವರಲ್ಲಿ ಯಾರೂ ಒಪ್ಪದ ಹಿನ್ನಲೆಯಲ್ಲಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ತಿರುಮಲ ಕೆಲವು ದಿನಗಳಿಂದ ಹಲವು ಹುಡುಗಿಯರನ್ನು ನೋಡಿಕೊಂಡು ಬಂದಿದ್ದರು. ಆದರೆ, ಹುಡುಗಿ ಕುಟುಂಬಸ್ಥರು ಆಸ್ತಿ, ಉದ್ಯೋಗ ನೋಡುತ್ತಿದ್ದರು. ಆದರೆ ತಿರುಮಲ ಹೋಮ್ ಗಾರ್ಡ್ ಕೆಲಸ ಮಾಡುತ್ತಿದ್ದರು.
ಬರುತ್ತಿದ್ದ ಸಂಬಳವೂ ಕಡಿಮೆ ಇತ್ತು. ಆದ್ದರಿಂದ ಹುಡುಗಿ ಕುಟುಂಬಸ್ಥರು ಹೋಮ್ ಗಾರ್ಡ್ ತಿರುಮಲರನ್ನ ತಿರಸ್ಕರಿಸುತ್ತಿದ್ದ ಕಾರಣ ತಿರುಮಲ ಕುಣಿಕೆಗೆ ಕೊರಳೊಡ್ಡಿದ್ದಾನೆ.
ಇನ್ನು ಹಲವು ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದ್ದು, ಆನ್‌ಲೈನ್ ಬೆಟ್ಟಿಂಗ್ ಚಟಕ್ಕೆ ಬಿದ್ದಿದ್ದ ಯುವಕನೊಬ್ಬ ಸಾಲದ ಸುಳಿಗೆ ಸಿಲುಕಿ, ಅದರಿಂದ ಹೊರಬರಲಾರದೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜರಾಜೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಮನೋಜ್ ಕುಮಾರ್ (25) ಮೃತ ದುರ್ದೈವಿ.
ಖಾಸಗಿ ಬ್ಯಾಂಕ್ ಉದ್ಯೋಗಿಯಾಗಿದ್ದ ಮನೋಜ್ ಹಲವು ತಿಂಗಳಿಂದ ಆನ್‌ಲೈನ್ ಬೆಟ್ಟಿಂಗ್ ಚಟಕ್ಕೆ ದಾಸನಾಗಿದ್ದ. ತಾನು ಕೆಲಸ ಮಾಡುತ್ತಿದ್ದ ಬ್ಯಾಂಕಿನಿಂದಲೇ ಸಾಲ ಪಡೆದು ಆ ಹಣವನ್ನೆಲ್ಲಾ ಬೆಟಿಂಗ್ ಮೇಲೆ ಸುರಿದಿದ್ದ. ಸಾಲ, ಸೋಲಿನ ಸುಳಿಯಲ್ಲಿ ಸಿಲುಕಿದ್ದ ಮನೋಜ್ ಸೆಲ್ಫಿ ವಿಡಿಯೋ ಮಾಡಿ ತನ್ನ ಪರಿಸ್ಥಿತಿ ಹೇಳಿಕೊಂಡು ಫ್ಯಾನಿಗೆ ನೇಣು ಹಾಕಿಕೊಂಡಿದ್ದಾನೆ.
ಆರ್‌ಆರ್ ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಶವವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ. ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




