Ad imageAd image

ಮನೆ ಕೆಲಸದಾಕೆಯ ಕೈಚಳಕ : 1 ಕೋಟಿ ರೂ. ಮೌಲ್ಯದ ವಸ್ತುಗಳ ಜಪ್ತಿ 

Bharath Vaibhav
ಮನೆ ಕೆಲಸದಾಕೆಯ ಕೈಚಳಕ : 1 ಕೋಟಿ ರೂ. ಮೌಲ್ಯದ ವಸ್ತುಗಳ ಜಪ್ತಿ 
WhatsApp Group Join Now
Telegram Group Join Now

ಬೆಂಗಳೂರು: ತನ್ನ ಮಾಲೀಕನ ಬಳಿ ನಗ್ಡು ಚಿನ್ನದ ಒಡವೆ ಸೇರಿದಂತೆ ಬರೋಬ್ಬರಿ 1 ಕೋಟಿಗೂ ಅಧಿಕ ಮೌಲ್ಯದ ಬೆಲೆ ಬಾಳುವ ವಸ್ತುಗಳನ್ನು ಪರಾರಿಯಾಗಿದ್ದ ಮನೆ ಕೆಲಸದಾಕೆಯನ್ನು ಪೊಲೀಸರು ಬಂಧಿಸಿದ್ದಾರೆ.

ಈ ಪೈಕಿ 67 ಲಕ್ಷ ನಗದು, ಚಿನ್ನಾಭರಣ ಸಹಿತ 1 ಕೋಟಿಗೂ ಅಧಿಕ ಮೌಲ್ಯದ ವಸ್ತುಗಳನ್ನು ಮಹಿಳೆ ಕದ್ದಿದ್ದಳು.ಹೀಗೆ ಕದ್ದು ಪರಾರಿಯಾಗಿದ್ದ ಉಮಾ (43) ಎಂಬಾಕೆಯನ್ನು ಬೆಂಗಳೂರಿನ ಚಾಮರಾಜಪೇಟೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚಾಮರಾಜಪೇಟೆಯ ನಿವಾಸಿ ಉದ್ಯಮಿ ರಾಧಾ ಎಂಬುವವರು ನೀಡಿದ್ದ ದೂರಿನ ಆಧಾರದ ಮೇಲೆ ತನಿಖೆ ನಡೆಸಿ ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಈ ಮಾಲಕು ರಾಧಾ, ಅನಾರೋಗ್ಯದಿಂದ ಬಳಲುತ್ತಿದ್ದಕಾರಣ ತಿಂಗಳಿಗೆ 23 ಸಾವಿರ ರೂ. ನೀಡಿ ಉಮಾಳನ್ನು ಕೆಲಸಕ್ಕೆ ಇಟ್ಟುಕೊಂಡಿದ್ರು.

ಆದ್ರೆ ಈ ಜೂನ್ 4ರಂದು ಬೆಳಿಗ್ಗೆ ಮನೆ ಕೆಲಸದಾಕೆ ಕೈಯಲ್ಲಿ ಬ್ಯಾಗ್‌ವೊಂದನ್ನು ಹಿಡಿದು ತೆರಳಿರುವುದು ಸಿಸಿಟಿವಿ ಯಲ್ಲಿ ಕಂಡು ಬಂದಿತ್ತು. ಇದ್ರಿಂದ ಅನುಮಾನಗೊಂಡ ಮಾಲಕಿ ಬೀರು ನೋಡಿದಾಗ ಹಣ ನಾಪತ್ತೆಯಾಗಿತ್ತು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಉಮಾಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ತಾನೇ ಈ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾಳೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!