ವಿಜಯಪುರ : ಬಸವನ ಬಾಗೇವಾಡಿ ಪಟ್ಟಣದ ಬಸವಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ನಗರಾಭಿವೃದ್ಧಿಕೋಶ ಹಾಗೂ ಪುರಸಭೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನಿರ್ಮಿಸಿರುವ ಜಿ +1 ಆಸರೆ ಯೋಜನೆ ಸಚಿವರಾದ ಶಿವಾನಂದ್ ಪಾಟೀಲ್ರವರು ಮನೆಗಳ ಹಕ್ಕು ಪತ್ರ ವಿತರಣೆ ಮಾಡಿದರು.ಹಾಗೂ ವಿಕಲಚೇತನರಿಗೆ ಸೈಕಲ್ ಮತ್ತು ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣಾ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಸಚಿವರಾದ ಶಿವಾನಂದ್ ಪಾಟೀಲ್ ಅವರು ಆಶ್ರಯ ಕಾಲೋನಿಯಲ್ಲಿ ರಸ್ತೆಗಳು ಒಳಚರಂಡಿ ಕುಡಿಯುವ ನೀರಿನ ವ್ಯವಸ್ಥೆ ಹಲವಾರು ಸೌಲಭ್ಯಗಳನ್ನ ನಾವು ಮಾಡಿದ್ದೇವೆ. ಮತ್ತು ಬಡವರಿಗೆ ತುಂಬಾ ಸಹಾಯವಾಗುತ್ತದೆ ಅಂತ ಹೇಳಿದರು.
ಇದೇ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷರು ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರು ಅಂಗವಿಕಲರು ಊರಿನ ಹಿರಿಯರು ಭಾಗವಹಿಸಿದ್ದರು.
ವರದಿ : ಕೃಷ್ಣ ರಾಠೋಡ್




