ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಕೆ.ಎನ್.ರಾಜಣ್ಣ ಅವರ ವಿರುದ್ಧ ಹನಿಟ್ರ್ಯಾಪ್ ವಿಫಲ ಯತ್ನ ಸಂಚಲನ ಮೂಡಿಸಿದ್ದರೆ, ಇತ್ತ ಬಿಜೆಪಿಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಉಚ್ಚಾಟನೆ ಸದ್ದು ಮಾಡುತ್ತಿದೆ.
ಉಚ್ಚಾಟನೆ ನಂತರದಲ್ಲಿ ಮತ್ತಷ್ಟೂ ರೆಬಲ್ ಆಗಿರುವ ಯತ್ನಾಳ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಯಡಿಯೂರಪ್ಪ ವಿರುದ್ಧ ಕಟುವಾಗಿ ವಾಗ್ದಾಳಿ ಮುಂದುವರಿಸಿದ್ದು, ಇದೀಗ ಹೊಸ ಬಾಂಬ್ ವೊಂದನ್ನು ಸಿಡಿಸಿದ್ದಾರೆ.
ಹನಿಟ್ರ್ಯಾಪ್ ಪ್ರಕರಣವನ್ನು ಪ್ರಸ್ತಾಪಿಸಿದ ಯತ್ನಾಳ್, ಟ್ರ್ಯಾಪ್ ಹಿಂದೆ ಡಿಸಿಎಂ ಡಿಕೆಶಿ ಮತ್ತು ವಿಜಯೇಂದ್ರ ಟೀಂ ಇದೆ. ಈ ಹಿಂದೆ ಡಿಕೆಶಿ ಮತ್ತು ವಿಜಯೇಂದ್ರ ಸೇರಿ ರಮೇಶ್ ಜಾರಕಿಹೊಳಿಯವರ ಸಿಡಿ ಮಾಡಿಸಿದ್ದರು. ಈಗ ಕಾಂಗ್ರೆಸ್ನಲ್ಲಿ ಎದ್ದಿರುವ ಹನಿಟ್ರ್ಯಾಪ್ ಬಿರುಗಾಳಿ ಕೇಸ್ನಲ್ಲೂ ಇದೇ ತಂಡವಿದೆ ಎಂದು ಗಂಭೀರವಾಗಿ ಯತ್ನಾಳ್ ಆರೋಪಿದ್ದಾರೆ.
ದೆಹಲಿಯಲ್ಲಿರುವ ಬಿಜೆಪಿ ಸಂಸದರು ವಿಜಯೇಂದ್ರ ವಿರುದ್ಧವಾಗಿದ್ದು, ಅವನನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆಯಬೇಕು ಎಂದು ಅಭಿಪ್ರಾಯಪಡುತ್ತಿದ್ದಾರೆ. ವಿಜಯೇಂದ್ರ.. ಯಡಿಯೂರಪ್ಪ ಅಪ್ಪಮಕ್ಕಳ ಕುಟುಂಬ ರಾಜಕಾರಣ ನಿರ್ಮೂಲನೆ ಮಾಡುವೆ ಎಂದು ಇದೇ ವೇಳೆ ಯತ್ನಾಳ್ ಗುಡುಗಿದರು.