ಇಲಕಲ್: ಇಲಕಲ್ ಇಲ್ಲಿನ ನಿವೃತ್ತ ಉಪನ್ಯಾಸಕ ರಾಮನಗೌಡ ಸಂದಿಮನಿ ಅವರ ಸುಪುತ್ರರಿಯಾದ ಐಶ್ವರ್ಯ ಗೌಡರ (ಸಂದಿಮನಿ) ಕುಶಾಲನಗರದ ತರಬೇತಿ ಕೇಂದ್ರ ದಲ್ಲಿ 2019 ರಿಂದ 2024 ರ ವರೆಗೆ ಅರಣ್ಯ ಇಲಾಖೆಯಲ್ಲಿ ಕಾರ್ಯದಕ್ಷತೆಯಿಂದ ಕಾರ್ಯನಿರ್ವಹಿಸಿ ಪರಿಣಿತ ಸಂಪನ್ಮೂಲ ವ್ಯಕ್ತಿಗಳನ್ನು ಇಲಾಖೆಯಲ್ಲಿ ಕಾರ್ಯನಿಷ್ಠೆಯಿಂದ ಕೆಲಸ ನಿರ್ವಹಿಸುವಂತೆ ತಯಾರಿಸಿ ರೈಫಲ್ ತರಬೇತಿ, ಶಸ್ತ್ರಾಸ್ತ್ರ ನಿರ್ವಹಣೆ, ಕ್ಯಾನ್ವೊಕೇಶನ್ ಪರೇಡಗೆ, ನಿಖರವಾದ ಮಾರ್ಗದರ್ಶನ ನೀಡಿ ಉತ್ತಮ ಕಾರ್ಯಧ್ಯಕ್ಷತೆ ದಾಖಲಿಸಿ ಸಮಯ ಪಾಲನೆ ಮತ್ತು ಪ್ರಾಮಾಣಿಕತೆಯಿಂದ ಮಾತೃ ಇಲಾಖೆಯ ಕಾರ್ಯನಿರ್ವಹಿಸಿ ಪುರುಷ ಸಿಬ್ಬಂದಿಗೂ ಕಮ್ಮಿ ಇಲ್ಲದಂತೆ ತರಬೇತಿಯಲ್ಲಿ ಸುಮಾರು 5 ವರ್ಷಗಳ ಕಾಲ ಕರ್ತವ್ಯ ನಿಷ್ಠೆ ಸಮಯ ಪಾಲನೆ ತರಬೇತಿಯ ವಿದ್ಯಾರ್ಥಿಗಳಿಗೆ ರೋಡ್ ಮಾಡಲ್ ಆಗಿ ಕಾರ್ಯ ನಿರ್ವಹಿಸಿ ಸೇವೆ ಸಲ್ಲಿಸಿದ ಕುಮಾರಿ ಐಶ್ವರ್ಯ ಗೌಡರ(ಸಂದಿಮನಿ) ಅವರಿಗೆ ಮಾನ್ಯ ಮುಖ್ಯಮಂತ್ರಿ ಸನ್ಮಾನ್ಯ ಸಿದ್ದರಾಮಯ್ಯನವರು ಕಾರ್ಯದಕ್ಷತೆ ಕಾರ್ಯಕ್ಷಮತೆ ಮತ್ತು ತರಬೇತಿಯಲ್ಲಿನ ಸಾಧನೆ ಸ್ಯ್ಲಾಗನಿಯ ಸೇವೆಗಾಗಿ ಗೌರವ ಸನ್ಮಾನ ಸಲ್ಲಿಸಿದ್ದು ನಮಗೆ ತುಂಬ ಸಂತೋಷವಾಗಿದೆ ಎಂದು ಸಾಧಕೀಯ ತಂದೆ-ತಾಯಿಗಳು ಇಷ್ಟು ಚಿಕ್ಕ ವಯಸ್ಸಿನಲ್ಲಿ ನಮ್ಮ ಮಗಳು ಇಲಾಖೆಯ ಜವಾಬ್ದಾರಿಯುತ ಕಾರ್ಯ ನಿರ್ವಹಿಸಿದ ಐಶ್ವರ್ಯಗೆ ಕೃತಜ್ಞತೆ ಸಲ್ಲಿಸಿದರು.




