ಪಾವಗಡ :ತಾಲೂಕಿನ ಬಿಜೆಪಿಯ ಹಿರಿಯ ನಾಯಕರಾದ ಡಾ ಜಿ ವೆಂಕಟರಾಮಯ್ಯ ಅವರನ್ನ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಮಿತಿಯ ಸದಸ್ಯರಾಗಿ ನೇಮಕಗೊಳಿಸಿದ ಹಿನ್ನೆಲೆಯಲ್ಲಿ ಗುರುವಾರ ಪಾವಗಡ ಪಟ್ಟಣದ ಪತಾಂಜಲಿ ನಗರದ ಅವರ ನಿವಾಸದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ನಾಯಕರುಗಳು ಹಾಗೂ ಡಾ. ಜಿ ವೆಂಕಟರಾಮಯ್ಯ ಅವರ ಬೆಂಬಲಿಗರು ಪುಷ್ಪಮಾಲೆ ಹಾಕುವುದರ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಡಾ. ಜಿ ವೆಂಕಟರಾಮಯ್ಯ ಮಾತನಾಡಿ ಬಿಜೆಪಿ ಪಕ್ಷದಲ್ಲಿ ಅನೇಕ ವರ್ಷಗಳಿಂದ ಸಲ್ಲಿಸಿದ ಸೇವೆಯನ್ನು ಗುರುತಿಸಿ ರಾಜ್ಯ ಕಾರ್ಯಕಾರಣಿ ಸಮಿತಿಗೆ ನೇಮಕಗೊಳಿಸಿರುವುದು ಖುಷಿಯ ವಿಚಾರ ಸೇವೆ ಮಾಡಲು ಮತ್ತಷ್ಟು ಪುಷ್ಠಿ ಸಿಕ್ಕಿದೆ ಮತ್ತು ಬಿ ಎಸ್ ಯಡಿಯೂರಪ್ಪ, ರಾಜ್ಯಾಧ್ಯಕ್ಷ ಬಿ ವೆ ವಿಜಯೇಂದ್ರ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.
ಈ ವೇಳೆ ತಿರುಮಣಿ ಸುರೇಂದ್ರ, ಗಂಗಾಧರ್ ನಾಯ್ಡು, ಶಾಂತಿ ಮೆಡಿಕಲ್ ದೇವರಾಜು, ದೊಡ್ಡಹಳ್ಳಿ ಅಶೋಕ್, ಕಾವಲಗೇರಿ ರಾಮಾಂಜಿ, ವಾಸು, ಹರೀಶ್, ಸಾಸಲು ಕುಂಟೆ ಪಲಾಕ್ಷ, ಮೋಹನ್, ಮಂಜು, ಚಲಪತಿ, ಸೇರಿದಂತೆ ಹಲವರು ಹಾಜರಿದ್ದರು.
ವರದಿ: ಶಿವಾನಂದ




