ಬೆಳಗಾವಿ: ಜಿಲ್ಲೆಯ ಕಂಗ್ರಾಳಿ ಬಿ.ಕೆ. ಗ್ರಾಮದ ನಿವಾಸಿಯಾದ ಮಲ್ಲಿಕಾರ್ಜುನ ಕರೆರುದ್ರನ್ನವರ ಅವರಿಗೆ ಶಿಕ್ಷಣ, ಸಾಮಾಜಿಕ ಹಾಗೂ ಗ್ರಾಮೀಣ ಅಭಿವೃದ್ಧಿಯಲ್ಲಿ ಸೇವೆಯನ್ನು ಗುರುತಿಸಿ ಇವರಿಗೆ ಪ್ರತಿಷ್ಠಿತ ಅಮೆರಿಕಾದ ನೈಋತ್ಯ ಅಮೆರಿಕನ್ ವಿಶ್ವವಿದ್ಯಾಲಯ ಇವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸುತ್ತಿದೆ, ಮೇ ತಿಂಗಳ 24 ರಂದು ದಿಲ್ಲಿಯಲ್ಲಿ ನಡೆಯವ ಈ ಕಾರ್ಯಕ್ರಮದಲ್ಲಿ ಇವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರದಾನ ನಡೆಯಲಿದೆ, ಕರ್ನಾಟಕ ಐಕಾನಿಕ್ ಎಕ್ಸಲೆನ್ಸ್ ಅವಾರ್ಡ್, ಮಹಾರಾಷ್ಟ್ರದ ವಿಶ್ವ ರತ್ನ ಪ್ರಶಸ್ತಿ, ಸರ್. ಎಂ. ವಿಶ್ವೇಶ್ವರಯ್ಯಾ ಮೆಮೋರಿಯಲ್ ಅವಾರ್ಡ್ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ ಸದ್ಯ ಸಿಎಸ್ಸಿ ಬೆಳಗಾವಿ ಜಿಲ್ಲಾ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ವರದಿ: ಮಹಾಂತೇಶ ಎಸ್ ಹುಲಿಕಟ್ಟಿ