
ಬಿಗ್ ಬಾಸ್ 19, ಸ್ಪರ್ಧಿಯಲ್ಲಿ ಒಬ್ಬರಾಗಿರುವ ಗೌರವ ಖನ್ನಾ ಅವರು ತಮ್ಮ ಹೆಂಡತಿ ಆಕಾಂಕ್ಷಾ ಚಾಮುಲಾ ಅವರ ವಿಚಿತ್ರ ಅಭಿಪ್ರಾಯ ಒಂದನ್ನು ಹಂಚಿಕೊಂಡಿದ್ದು, ತಮ್ಮ ಪತ್ನಿಗೆ ಮಕ್ಕಳನ್ನು ಹೊಂದುವುದು ಇಷ್ಟವಿಲ್ಲ ಎಂದು ಹೇಳುವ ಮೂಲಕ ಅಚ್ಛರಿಯ ಸುದ್ದಿಗೆ ಕಾರಣರಾಗಿದ್ದಾರೆ.

ಇದೇ ವೇಳೆ ತಮಗೆ ( ಗೌರವ ಖನ್ನಾ) ಮಕ್ಕಳನ್ನು ಹೊಂದುವುದು ಇಷ್ಟವಿದೆ. ಆದರೆ ಇದು ಲವ್ ಮ್ಯಾರೆಜ್ ವಿಷಯ ಹಾಗಾಗಿ ಪತ್ನಿ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕಾಗಿದೆ ಎಂದು ಹೇಳುವ ಮೂಲಕ ತಾವು ಮಕ್ಕಳನ್ನು ಪಡೆಯಲು ಬಯಸಿಲ್ಲ ಎಂದು ಹೇಳಿಕೆ ನೀಡಿ ಅಚ್ಛರಿ ಮೂಡಿಸಿದ್ದಾರೆ.
ಪ್ರೀತಿಸಿ ಮದುವೆಯಾದ ಈ ಇಬ್ಬರು ದಂಪತಿಗಳು ತಮ್ಮ ತಮ್ಮ ಕಾರ್ಯಕ್ಷೇತ್ರದಲ್ಲಿ ಬ್ಯುಜಿಯಂತೆ. ಹೀಗಾಗಿ ತಮ್ಮ ಮಕ್ಕಳನ್ನು ನೋಡಿಕೊಳ್ಳಲು ಇನ್ನೊಬ್ಬರನ್ನು ನೇಮಿಸುವುದು ನಮಗೆ ಇಷ್ಟವಿಲ್ಲ. ಹೀಗಾಗಿ ತಮ್ಮ ಜವಾಬ್ದಾರಿ ನಡುವೆ ಮಕ್ಕಳ ಜವಾಬ್ದಾರಿ ಹೊಂದಲು ಈ ಇಬ್ಬರು ದಂಪತಿಗಳು ನಿರಾಕರಿಸಿದ್ದಾರೆ ಎನ್ನುವ ಸುದ್ದಿ ಹರಡಿದೆ.




