Ad imageAd image

ಹುಬ್ಬಳ್ಳಿಯಲ್ಲಿ ಭೀಕರವಾದ ಮರ್ಡರ್ : ಯುವಕನನ್ನ ಕೊಂದು ಬಿಸಾಕಿ ಹೋದ ದುಷ್ಕರ್ಮಿಗಳು

Bharath Vaibhav
ಹುಬ್ಬಳ್ಳಿಯಲ್ಲಿ ಭೀಕರವಾದ ಮರ್ಡರ್ : ಯುವಕನನ್ನ ಕೊಂದು ಬಿಸಾಕಿ ಹೋದ ದುಷ್ಕರ್ಮಿಗಳು
WhatsApp Group Join Now
Telegram Group Join Now

ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಭೀಕರವಾದ ಮರ್ಡರ್ ಆಗಿದ್ದು 29 ವರ್ಷದ ಯುವಕನನ್ನು ದುಷ್ಕರ್ಮಿಗಳು ಭೀಕರವಾಗಿ ಕೊಲೆ ಮಾಡಿದ್ದಾರೆ. ಕೊಂದ ಬಳಿಕ ದುಷ್ಕರ್ಮಿಗಳು ಶವವನ್ನು ರಸ್ತೆಯ ಬದಿಯಲ್ಲಿ ಬಿಸಾಕಿ ಹೋಗಿದ್ದಾರೆ.

ಹುಬ್ಬಳ್ಳಿಯ ರಾಷ್ಟ್ರೀಯ ದಾರಿಯಲ್ಲಿ ಕಿರಾತಕರು ಶವ ಎಸೆದಿದ್ದಾರೆ.ಗದಗ ರಸ್ತೆಯ ಐಟಿಸಿ ಗೌಡನ್ ಸಮೀಪವಿರುವ ಹೆದ್ದಾರಿಯಲ್ಲಿ ಯುವಕನ ಶವ ಬಿಸಾಕಿದ್ದಾರೆ.

ಮಂಜುನಾಥ ಗಾಣಿಗೇರ (29) ಹತ್ಯೆಯಾದ ಯುವಕ ಎಂದು ತಿಳಿದುಬಂದಿದೆ. ಮೃತ ಮಂಜುನಾಥ್ ಹುಬ್ಬಳ್ಳಿ ತಾಲೂಕಿನ ಬಂಡಿವಾಡ ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ.

ಬೇರೆ ಕಡೆ ಕೊಲೆ ಮಾಡಿ ನಂತರ ಗುರುತು ಸಿಗದಂತೆ ರಸ್ತೆಯ ಮೇಲೆ ಬಿಸಾಕಿ ಹೋಗಿದ್ದಾರೆ ರಸ್ತೆಯಲ್ಲಿ ಹೋಗುತ್ತಿದ್ದವರಿಂದ ಪೊಲೀಸರಿಗೆ ಮಾಹಿತಿ ಹೋಗುತ್ತದೆ. ನಂತರ ಪೊಲೀಸರು ಸ್ಥಳಕ್ಕೆ ಬಂದು ತನಿಖೆ ನಡೆಸುತ್ತಿದ್ದಾರೆ. ಹತ್ಯೆಗೈದ ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಇದೀಗ ಬಲೆ ಬೀಸಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!