ಉಡುಪಿ : ಉಡುಪಿಯಲ್ಲಿ ಕಳೆದ ಮೇ 18 ರಂದು ನಡೆದ ಭಯಾನಕ ಗ್ಯಾಂಗ್ವಾರ್ ನ ದೃಶ್ಯಗಳು ಸೆರೆಯಾಗಿದ್ದು, ವಿಡಿಯೋ ವೈರಲ್ ಆಗಿದೆ.
ಕುಂಜಿಬೆಟ್ಟು ರಸ್ತೆಯಲ್ಲಿ ತಡರಾತ್ರಿ ನಡೆದಿದ್ದ ಗ್ಯಾಂಗ್ ವಾರ್ ಮೊಬೈಲ್ ಫೋನ್ ನಲ್ಲಿ ಸೆರೆಯಾಗಿದ್ದು, ನಡುರಸ್ತೆಯಲ್ಲಿ ನಡೆದ ಹೊಡೆದಾಟದ ದೃಶ್ಯ ವೈರಲ್ ಆಗಿದೆ.
ಯುವಕರು ಕಾರಿನಲ್ಲಿ ಬಂದು ಇನ್ನೊಂದು ಕಾರಿಗೆ ಡಿಕ್ಕಿ ಹೊಡೆಯುತ್ತಾರೆ. ಕೈಯಲ್ಲಿ ಮಚ್ಚು, ಲಾಂಗ್ಗಳಿರುವುದನ್ನು ನೋಡಬಹುದು. ಬಿಳಿ ಬಣ್ಣದ ಕಾರಲ್ಲಿರುವವರು ಕಪ್ಪುಬಣ್ಣದ ಕಾರನಲ್ಲಿದ್ದ ವ್ಯಕ್ತಿ ಲಾಂಗ್ ಹಿಡಿದು ದಾಳಿ ಮಾಡಲು ಬಂದಾಗ ಆತನ ಮೇಲೆ ವಾಹನ ಹರಿಸುವುದನ್ನು ನೀವು ನೋಡಬಹುದು.
ಮತ್ತು ಅವನು ಅಂಗಾತ ನೆಲಕ್ಕೆ ಬೀಳುವುದು ಕಾಣಿಸುತ್ತದೆ. ಕುಂಜಿಬೆಟ್ಟು ರಸ್ತೆಯಲ್ಲಿ ತಡರಾತ್ರಿ ನಡೆದಿದ್ದ ಗ್ಯಾಂಗ್ ವಾರ್ ನ ದೃಶ್ಯಾವಳಿಗಳನ್ನು ಎಲ್ಲರನ್ನು ಬೆಚ್ಚಿ ಬೀಳಿಸಿದೆ. ಬಿಜೆಪಿ ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.
ಕರ್ನಾಟಕ ಮಾಡೆಲ್!
ಗ್ಯಾಂಗ್ ವಾರ್ಗಳು, ಯುವತಿಯರ ಮೇಲೆ ಅತ್ಯಾಚಾರ, ಹಲ್ಲೆ, ಹತ್ಯೆ, ಬಾಂಬ್ ಬ್ಲಾಸ್ಟ್ಗಳು, ಗಾಂಜಾ, ಅಫೀಮು, ರೇವ್ ಪಾರ್ಟಿಗಳು, ಪಾಕೈಸ್ತಾನ್ ಜಿಂದಾಬಾದ್ ಘೋಷಣೆಗಳು ಸೇರಿ ಇತ್ಯಾದಿಗಳು @INCKarnataka ಸರ್ಕಾರದ ಆಡಳಿತದಲ್ಲಿ ಕಾಮನ್ ಆಗಿದೆ.
ಉಗ್ರರು, ಮತಾಂಧರು, ಪುಂಡರು, ಕಿಡಿಗೇಡಿಗಳು ರೌಡಿಗಳಿಗೆ @siddaramaiah… pic.twitter.com/s0SVgbBYW2
— BJP Karnataka (@BJP4Karnataka) May 25, 2024