Ad imageAd image

ಕಲುಷಿತ ನೀರು ಸೇವಿಸಿ ವಾಂತಿ ಬೇಧಿಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ

Bharath Vaibhav
ಕಲುಷಿತ ನೀರು ಸೇವಿಸಿ ವಾಂತಿ ಬೇಧಿಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ
WhatsApp Group Join Now
Telegram Group Join Now

ಕಲಘಟಗಿ:-  ತಾಲೂಕಿನ ಮುತಗಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ವಾಂತಿ ಬೇಧಿಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಾಲೂಕು ಆಸ್ಪತ್ರೆಗೆ ಮಾಜಿ ವಿಧಾನ ಪರಿಷತ್ ಸದಸ್ಯ ನಾಗರಾಜ ಛಬ್ಬಿ ಶುಕ್ರವಾರ ಭೇಟಿ ನೀಡಿ ರೋಗಿಗಳ ಯೋಗಕ್ಷೇಮವನ್ನು ವಿಚಾರಿಸಿದರು.
ವೈದ್ಯರೊಂದಿಗೆ ಚರ್ಚಿಸಿ ರೋಗಿಗಳಿಗೆ ಯಾವುದೇ ರೀತಿಯಲ್ಲಿ ಅನಾನುಕೂಲವಾಗದಂತೆ ಎಚ್ಚರಿಕೆ ತೆಗೆದುಕೊಳ್ಳಿ ಎಂದು ತಿಳಿಸಿದರು. ನಂತರ ಚಿಕಿತ್ಸೆ ಪಡೆಯುತ್ತಿರುವ ಪ್ರತಿಯೊಂದು ರೋಗಿಗಳಿಗೆ ಹಣ್ಣು ಹಂಪಲ ಹಾಗೂ ಶುದ್ಧ ಕುಡಿಯೋ ನೀರಿನ ಬಾಟಲ್‌ಗಳನ್ನು ವಿತರಣೆ ಮಾಡಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಒಂದು ವರ್ಷದಿಂದ ತಾಲೂಕಿನಾದ್ಯಂತ ಸಮಸ್ಯೆಗಳ ಸರಮಾಲೆ ಹೆಣೆದಂತಾಗಿದೆ. ಅತೀವೃಷ್ಟಿಯಿಂದಾಗಿ ರೈತರ ಬೇಳೆ ಹಾನಿಯಾಗಿ ಸಂಕಷ್ಟದಲ್ಲಿದ್ದಾರೆ. ಗ್ರಾಮಿಣ ರಸ್ತೆಗಳಲ್ಲಿ ವಾಹನಗಳು ತೋಲಾಡುತ್ತಿವೆ ಅಷ್ಟೋಂದು ಹದಗೆಟ್ಟು ಹೋಗಿವೆ, ತಾಲೂಕು ಹಾಗೂ ಗ್ರಾಮ ಮಟ್ಟದ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸದೆ ಇರುವುದರಿಂದ ಇಂತಹ ಸಮಸ್ಯೆಗಳು ಉದ್ಭವಿಸುತ್ತಿವೆ. ಇದರಲ್ಲಿ ಸ್ಥಳಿಯ ಶಾಸಕರ ನಿಷ್ಕಾಳಜಿಯೂ ಇದೆ, ತಾಲೂಕಿನಲ್ಲಿ ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು ಜನರ ಮುಂದೆ ಬಂದು ಸಾರ್ವಜನಿಕರ ಅಹವಾಲು ಸ್ವೀಕರಿಸದಿರುವುದು ವಿಪರ್ಯಾಸವೇ ಸರಿ ಎಂದರು.

ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ನಾಗರಾಜ್ ಚಬ್ಬಿ, ಗ್ರಾಮೀಣ ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ, ಮಂಡಲ ಅಧ್ಯಕ್ಷ ಯಲ್ಲಾರಿ ಸಿಂಧೆ, ಮದನ್ ಕುಲಕರ್ಣಿ, ಮಾಂತೇಶ್ ತಹಸೀಲ್ದಾರ್, ಶಿವು ಮಾದಿ, ಕಲ್ಮೇಶ್ ಬೇಲೂರು, ಆನಂದ್ ಕಡ್ಲಾಸ್ಕರ, ಪುಂಡಲೀಕ್ ಜಾದವ, ಶಂಕರಗೌಡ ಬಾವಿಕಟ್ಟಿ, ಗುಡುಸಾಬ್ ಮಿಟಾಯಿಗಾರ, ಬಸವರಾಜ ಹೊನ್ನಿಹಳ್ಳಿ, ವಿನಾಯಕ ಗೌಳಿ, ಶ್ರೀಧರ್ ದ್ಯಾವಪ್ಪನವರ್, ಸಂತೋಷ್ ಮದನಬಾವಿ. ಪರಶುರಾಮ ಹುಲಿಹೊಂಡ, ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ : ಶಶಿಕುಮಾರ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!