ಚನ್ನಮ್ಮನ ಕಿತ್ತೂರು:– ಕಿತ್ತೂರಿನ ಬೆಲ್ಲದ ಓಣಿಯಲ್ಲಿ ಎಂ ಎಸ್ ಐಎಲ್ ಮದ್ಯ ಅಂಗಡಿ ಸ್ಥಳಾಂತರಿಸಬೇಕೆಂದು ಒತ್ತಾಯಿಸಿ ಕಿತ್ತೂರಿನ ಬೆಲ್ಲದ ಓಣಿಯ ಮಹಿಳೆಯರು ಮತ್ತು ಯುವಕರು ಮದ್ಯ ಅಂಗಡಿ ಮುಂದೆ ಅಹೋರಾತ್ರಿ ಧರಣಿ ಪ್ರಾರಂಭಿಸಿದ್ದಾರೆ.
ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತು ಶಾಸಕರಿಗೆ ಮನವಿ ನೀಡಿದರು ಸಹ ಯಾವುದೇ ಪ್ರಯೋಜನವಾಗಿಲ್ಲಿಲ್ಲ ಇದ್ದರಿಂದ ಮಹಿಳೆಯರು ಯುವಕರು ಸೇರಿ ಆಹೋರಾತ್ರಿ ಧರಣಿ ಪ್ರಾರಂಭಸಿದ್ದಾರೆ. ಬೆಲ್ಲದ ಓಣಿಯಲ್ಲಿರುವ ಎಂ ಎಸ್ ಐಎಲ್ ಮಧ್ಯ ಮಾರಟ ಮಳಿಗೆ ಸ್ಥಳಾಂತರವಾಗದೆ ಇರುವ ಕಾರಣ ಆ ವಾರ್ಡಿನಲ್ಲಿರುವ ಜನರಿಗೆ ಹಾಗೂ ಅಕ್ಕಪಕ್ಕ ಮನೆಯ ಮುಂದೆ ಚೀರಾಡುತ್ತಿರುವುದರಿಂದ ಜನರಿಗೆ ಇನ್ನಿಲ್ಲದ ಸಮಸ್ಯೆಯಾಗುತ್ತಿದೆ. ಎಂದು ಮಹಿಳೆಯರು ಮತ್ತು ಯುವಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಕಿತ್ತೂರು ಉತ್ಸವದ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿಗಳಾದ ಮಹ್ಮದ್ ರೋಷನ್ ಅವರಿಗೆ ಅಲ್ಲಿಯ ಮಹಿಳೆಯರು ಮತ್ತು ಯುವಕರು ಸೇರಿ ಮದ್ಯದ ಅಂಗಡಿ ಸ್ಥಳಾಂತರಿಸಬೇಕೆಂದು ಮನವಿ ಮಾಡಿಕೊಂಡಿದ್ದರು ಜಿಲ್ಲಾಧಿಕಾರಿಗಳಾದ ಮಹ್ಮದ್ ರೋಷನ್ ಅವರು ಮಾತನಾಡಿ ಕೇವಲ 15 ದಿನಗಳಲ್ಲಿ ಮದ್ಯದ ಅಂಗಡಿ ಸ್ಥಳಾಂತರಿಸಲಾಗುವುದು ಎಂದು ಆಶ್ವಾಸನೆ ನೀಡಿ ಹೋಗಿದ್ದಾರೆ ಆದರೆ ಮುರು ತಿಂಗಳ ಕಳೆದರು ಸಹ ಇದುವರೆಗೆ ಎಂ ಎಸ್ ಐಎಲ್ ಮದ್ಯದ ಸ್ಥಳಾಂತರವಾಗದೆ ಇರುವ ಕಾರಣ ಆಹೋರಾತ್ರಿ ಮಹಿಳೆಯರು ಮತ್ತು ಯುವಕರು ಹೋರಾಟ ಪ್ರಾರಂಭಿಸಿದ್ದಾರೆ.
ವರದಿ:- ಬಸವರಾಜ ಭಿಮರಾಣಿ.