Ad imageAd image

ಮೂಲಭೂತ ಸೌಕರ್ಯಗಳಿಗಾಗಿ ಸತತ 4 ನೇ ದಿವಸಕ್ಕೆ ಕಾಲಿಟ್ಟ ಹಿರೇಹಟ್ಟಿಹೊಳಿ ಗ್ರಾಮಸ್ಥರ ಅಹೋರಾತ್ರಿ ಪ್ರತಿಭಟನೆ

Bharath Vaibhav
ಮೂಲಭೂತ ಸೌಕರ್ಯಗಳಿಗಾಗಿ ಸತತ 4 ನೇ ದಿವಸಕ್ಕೆ ಕಾಲಿಟ್ಟ ಹಿರೇಹಟ್ಟಿಹೊಳಿ ಗ್ರಾಮಸ್ಥರ ಅಹೋರಾತ್ರಿ ಪ್ರತಿಭಟನೆ
WhatsApp Group Join Now
Telegram Group Join Now

ಖಾನಾಪುರ :-ಮಲಪ್ರಭಾ ನದಿ ದಂಡೆಯ ಹಿರೇಹಟ್ಟಿ ಹೊಳಿ ಗ್ರಾಮ ಪಂಚಾಯಿತಿ ಕಟ್ಟಡದ ಆವರಣದಲ್ಲಿ ಗ್ರಾ.ಪಂ ಸದಸ್ಯೆ ಭಾಗ್ಯಶ್ರೀ ಹಣಬರ ನೇತೃತ್ವದಲ್ಲಿ ಎಲ್ಲಾ ಗ್ರಾಮಸ್ಥರ ಸಮ್ಮುಖದಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ಖಾಸಗಿಯವರ ಹಿಡಿತದಲ್ಲಿರುವ ಭೂಮಿಯನ್ನು ಒದಗಿಸುವಂತೆ ಕಳೆದ 4 ದಿವಸಗಳಿಂದ ಅಹೋರಾತ್ರಿ ಧರಣಿ ಮಾಡುತ್ತಿದ್ದರೂ ಸಹ ಯಾವುದೇ ಜಿಲ್ಲಾ ಮಟ್ಟದ ಅಧಿಕಾರಿಗಳು ಅಗಮಿಸದೇ ನಿರ್ಲಕ್ಷ ತೋರಿರುವುದರಿಂದ ನಾಳೆಯಿಂದ ಉಪವಾಸ ಸತ್ಯಾಗ್ರಹ ಮಾಡುತ್ತೇವೆ.

ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ. ಇನ್ನೊಂದು ಕಡೆ ಗ್ರಾ.ಪಂ ಅಧ್ಯಕ್ಷ ಸಹ ಅಲ್ಲೇ ಇದ್ರೂ ಸಹ ಪ್ರತಿಭಟನಾ ಸ್ಥಳಕ್ಕೆ ಆಗಮಿಸದೇ ಇರೋದು ನೋಡಿದ್ರೆ ಬಾರಿ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಆದ್ದರಿಂದ ನಮ್ಮ ನ್ಯೂಸ್ ನ ರಾಜ್ಯ ಪ್ರತಿನಿಧಿ ಬಸವರಾಜು ಭೇಟಿಕೊಟ್ಟು ವರದಿ ತಯಾರಿಸಿದ್ದಾರೆ.

ವರದಿ:-  ಬಸವರಾಜು. 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!