ಸಿಂದಗಿ:ನಗರದಲ್ಲಿ ಸೇರಿದಂತೆ ತಾಲೂಕಿನ ಹಲವು ಗ್ರಾಮಗಳಲ್ಲಿ ಕಳ್ಳತನ ಮಾಡಿದವನನ್ನು ಸಿಂದಗಿ ಪೋಲಿಸರು ಬಂಧಿಸಲಾಗಿದೆ. ಆರೋಪಿ ನಿಂಗಪ್ಪ ರಾಜಪ್ಪ ಬಡಿಗೇರ ಎಂದು ಹೇಳಲಾಗಿದೆ.ಬಂದಿತ ಆರೋಪಿಯು ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ರಾಜನಕೋಳೂರು ಗ್ರಾಮದವನು ಎಂದು ತಿಳಿದು ಬಂದಿದೆ. ಬಂದಿತ ಆರೋಪಿ ಆಗಾಗ ಬಂದು ಸಿಂದಗಿಯಲ್ಲಿ ಕಳ್ಳತನ ನಡೆಸಿರುವ ಕುರಿತು ಬಾಯಿಬಿಟ್ಟಿದ್ದಾನೆ.
ಬುಧವಾರ ಪಟ್ಟಣದಲ್ಲಿ ಸಂಶಯ ಬರುವ ರೀತಿಯಲ್ಲಿ ತಿರುಗಾಡುತ್ತಿದ್ದನು.ಸಿಂದಗಿ ಪೋಲಿಸರು ಆಗ ಈತನನ್ನು ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸಿದಾಗ ಪಟ್ಟಣದ ಕಲ್ಯಾಣ ನಗರ, ಮಲ್ಲಿಕಾರ್ಜುನ ನಗರ ಹಾಗೂ ಕೊಕಟನೂರು, ಸುಂಗಠಾಣ ಗ್ರಾಮಗಳಲ್ಲಿ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಆರೋಪಿತನಿಂದ ಒಂದು ಬೈಕ್, 105 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಸಿಂದಗಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಸಿಪಿಐ ನಾನಾಗೌಡ ಪೊಲೀಸಪಾಟೀಲ, ಪಿಎಸ್ಐ ಆರೀಫ್ ಮುಶಾಪುರಿ ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು.