Ad imageAd image

ಸಿಲಿಂಡರ್ ಗಾಗಿ ಗೃಹಕರ ಪರದಾಟ

Bharath Vaibhav
ಸಿಲಿಂಡರ್ ಗಾಗಿ ಗೃಹಕರ ಪರದಾಟ
WhatsApp Group Join Now
Telegram Group Join Now

ಸಿಂಧನೂರು: ನಗರದ ಶ್ರೀ ವಳಬಳ್ಳಾರಿ ಚನ್ನ ಬಸವೇಶ್ವರ ಗ್ಯಾಸ್ ಏಜೆನ್ಸಿ ಮುಂದೆ ಗ್ಯಾಸ್ ಕೊಂಡುಕೊಳ್ಳಲು ಗ್ರಾಹಕರು ಸರತಿ ಸಾಲಿನಲ್ಲಿ ನಿಂತರೂ ಕೂಡ ದೊರಕದ ಗ್ಯಾಸ್, ಟೋಕನ್ ಸಿಸ್ಟಮ್ ಅಳವಡಿಸಿ ಗ್ರಾಹಕರಿಗೆ ಅನುಕೂಲ ಕಲ್ಪಿಸಬೇಕು ಎಂದು ಗ್ರಾಹಕರು ರವಿಕುಮಾರ್ ಜವಳಗೇರಾ ಒತ್ತಾಯಿಸದ್ದಾರೆ
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಎಫೆಕ್ಟ್ ಅನಿಲದ ತೀವ್ರ ಅಭಾವ ಸೃಷ್ಟಿ ಆಗಿದ್ದು, ಸರಕಾರವು ಅಗತ್ಯ ಸೇವೆ ಗಳಿಗೆ ಹೊರತು ಪಡಿಸಿ ಉಳಿದ ಕಡೆ ಗ್ಯಾಸ್ ವಿತರಣೆಗೆ ಕಟ್ಟುನಿಟ್ಟಾದ ನಿಯಮಗಳನ್ನು ಜಾರಿಗೆ ತಂದಿದ್ದಾರೆ. ಆದರೆ ಸರ್ಕಾರವು ಎಷ್ಟೇ ನಿಯಮಗಳು ಜಾರಿಗೆ ತಂದರು ಗ್ರಾಹಕರು ಗ್ಯಾಸ್ ಕೊಂಡುಕೊಳ್ಳಲು ಸರತಿ ಸಾಲಿನ ವಾರನುಗಟ್ಟಲೆ ನಿಂತರು ಕೂಡ ದೊರಕದ ಪರಿಸ್ಥಿತಿ ನಿರ್ಮಾಣವಾಗಿರುವುದು ಶ್ರೀ ವಳಬಳ್ಳಾರಿ ಚನ್ನ ಬಸವೇಶ್ವರ ಗ್ಯಾಸ್ ಏಜೆನ್ಸಿ ಮುಂದೆ ಗುರುವಾರ ಕಂಡು ಬಂದಿದೆ. ನಾವು ಬೆಳಗ್ಗೆ 4 ಗಂಟೆಗೆ ಬರುತ್ತವೆ ಇಂದಿಗೆ ನಾಲ್ಕು ದಿನ ಆಗಿದೆ ಆದರೆ ನಮಗೆ ಗ್ಯಾಸ್ ಸಿಗುತ್ತಿಲ್ಲ. ಕೂಡಲೇ ಟೋಕನ್ ಸಿಸ್ಟಮ್ ಗೆ ಜಾರಿಗೆ ತರುವ ಮೂಲಕ ಎಲ್ಲರಿಗೂ ಗ್ಯಾಸ್ ದೊರಕುವ ರೀತಿಯಲ್ಲಿ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ವರದಿ: ಬಸವರಾಜ ಬುಕ್ಕನಹಟ್ಟಿ

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!