ಸ್ಯಾಂಡಲ್‌ವುಡ್ ನಟ ವಿಜಯ್ ರಾಘವೇಂದ್ರ ಅವರು ಡಾ.ರಾಜ್‌ಕುಮಾರ್ ಕುಟುಂಬಕ್ಕೆ ಸೇರಿದವರು. ಆದರೂ ಅವರು ತಮ್ಮದೇ ಪ್ರತಿಭೆ ಮೂಲಕ ಚಿನ್ನಾರ ಮುತ್ತನಾಗಿ ಇಂದಿಗೂ ಸಿನಿಪ್ರಿಯರಿಗೆ ಹತ್ತಿರವಾಗಿದ್ದಾರೆ. ಆದರೆ ಎಲ್ಲವೂ ಚೆನ್ನಾಗಿದ್ದ ಅವರ ಬಾಳಲ್ಲಿ ಒಂದು ಬಿರುಗಾಳಿಯೇ ಎದ್ದಿದ್ದು ಇನ್ನೂ ಮಾಸಿಲ್ಲ. ತಮ್ಮ ಪತ್ನಿ ಸ್ಪಂದನಾ ಅವರ ಅಕಾಲಿಕ ನಿಧನದಿಂದ ವಿಜಯ್ ರಾಘವೇಂದ್ರ ಅವರ ಬಾಳಲ್ಲಿ ಕತ್ತಲು ಆವರಿಸಿಕೊಂಡಿದ್ದಂತೂ ನಿಜ.
ಈ ನೋವನ್ನು ಮರೆಯಲು ವಿಜಯ್ ಏನು ಮಾಡುತ್ತಿದ್ದಾರೆ ಎಂದು ಸಂದರ್ಶನವೊಂದರಲ್ಲಿ ಅವರೇ ಹೇಳಿಕೊಂಡಿದ್ದಾರೆ. ವಿಜಯ ರಾಘವೇಂದ್ರ ಹಾಗೂ ಸ್ಪಂದನಾ ದಂಪತಿ ಸ್ಯಾಂಡಲ್‌ವುಡ್‌ನ ಮುದ್ದಾದ ಜೋಡಿ ಎಂದೇ ಕರೆಸಿಕೊಂಡಿದ್ದರು. ಇವರ ಲವ್‌ಸ್ಟೋರಿ ಕೂಡ ಅಷ್ಟೇ ಕುತೂಹಲಕಾರಿಯಾಗಿತ್ತು. ರಿಯಾಲಿಟಿ ಶೋಗಳಲ್ಲಿ ವಿಜಯ್ ರಾಘವೇಂದ್ರ ಅವರು ಸ್ಪಂದನಾರನ್ನ ಮದುವೆಯಾಗಿದ್ದು, ಅವರ ಲವ್ ಸ್ಟೋರಿ ಸೇರಿದಂತೆ ಎಲ್ಲವನ್ನೂ ಬಹಿರಂಗಪಡಿಸಿದ್ದರು.
ವಿಧಿಯಾಟ ಇವರಿಂದ ಸ್ಪಂದನಾರನ್ನು ಕಸಿದುಕೊಂಡಿತ್ತು. ಇದು ಇಡೀ ಸ್ಯಾಂಡಲ್‌ವುಡ್‌ಗೆ ನೋವು ಕೊಟ್ಟಿದ್ದ ವಿಚಾರವೂ ಹೌದು. ಇನ್ನು ಪತ್ನಿಯ ಅಗಲಿಕೆ ಬಳಿಕ ವಿಜಯ ರಾಘವೇಂದ್ರ ಅವರು ಮೌನಕ್ಕೆ ಶರಣಾಗಿಬಿಟ್ಟಿದ್ದರು. ಸ್ವಲ್ಪ ಸಮಯದ ನಂತರ ನಿಧಾನವಾಗಿ ಅವರು ತಮ್ಮ ಸಿನಿಮಾಗಳತ್ತ ಗಮನ ಹರಿಸಿದ್ದರು. ಏನೇ ಆದರೂ ಅವರು ತಮ್ಮ ಪತ್ನಿ ಸ್ಪಂದನಾ ಅವರಿಲ್ಲದ ದಿನಗಳನ್ನು ನೋಡುತ್ತಿರುವುದು ತುಂಬಾ ಸಂಕಟದ ವಿಚಾರ ಎನ್ನುವುದು ಎಲ್ಲರಿಗೂ ತಿಳಿಯುವಂತದ್ದು. ಆದರೆ ಆ ನೋವನ್ನು ಮರೆಯಲು ವಿಜಯ್ ರಾಘವೇಂದ್ರ ಏನು ಮಾಡುತ್ತಿದ್ದಾರೆ ಎಂದು ಅವರೇ ಹೇಳಿಕೊಂಡಿದ್ದಾರೆ.
ಪತ್ನಿ ಸ್ಪಂದನಾ ಸಾವಿನ ನೋವು ಮರೆಯಲು ಇದನ್ನ ಮಾಡ್ತಿದ್ದೀನಿ: ವಿಜಯ್ ರಾಘವೇಂದ್ರ ಹೇಳಿದ್ದೇನು? ಸ್ಪಂದನಾರನ್ನ ಕಳೆದುಕೊಳ್ಳುವ ಮುಂಚೆಯೂ ನಾನು ಸಿನಿಮಾಗಳನ್ನು ಮಾಡುತ್ತಿದ್ದೆ, ಈಗಲೂ ಸಿನಿಮಾಗಳನ್ನು ಮಾಡುತ್ತಿದ್ದೇನೆ. ನಾನು ಸದಾ ಸಿನಿಮಾಗಳನ್ನು ಮಾಡುತ್ತಿರಬೇಕು ಎನ್ನುವುದು ಸ್ಪಂದನಾ ಆಸೆ ಎಂದು ವಿಜಯ್ ಹೇಳಿದ್ದಾರೆ. ಪತ್ನಿ ಇಲ್ಲದ ನೋವನ್ನು ಮರೆಯಲು ಸಿನಿಮಾಗಳನ್ನು ಮಾಡುತ್ತಿದ್ದೇನೆ ಎನ್ನುವುದೂ ನಿಜ.
ಹಾಗೆಯೇ ಸಿನಿಮಾ ಎನ್ನುವುದು ನೋವನ್ನು ಮರೆಯಲು ಮಾಡುವ ಕೆಲಸವೂ ಅಲ್ಲ. ಆ ನೋವು ಎಂದಿಗೂ ಮರೆಯುವಂತದ್ದಲ್ಲ. ಅದನ್ನು ಜೊತೆಯಲ್ಲೇ ಇಟ್ಟುಕೊಂಡು ಈ ರೀತಿ ಕಾಣುತ್ತಿದ್ದೇನೆ ಎಂದು ವಿಜಯ್ ರಾಘವೇಂದ್ರ ಹೇಳಿದ್ದಾರೆ. ನಾನು ಸಿನಿಮಾ ಹಾಗೂ ಕಿರುತೆರೆಯಲ್ಲಿ ನನಗೆ ಇಷ್ಟವಾದ ಕೆಲಸಗಳನ್ನು ಮಾಡುತ್ತಲೇ ಇರಬೇಕು. ಇದಕ್ಕೂ ನನ್ನ ಪತ್ನಿ ಸ್ಪಂದನಾ ಅವರೇ ಸ್ಫೂರ್ತಿ. ನಟ ವಿಜಯ್ ರಾಘವೇಂದ್ರ ಮತ್ತು ಸ್ಪಂದನಾ ಅವರು 2007ರ ಆಗಸ್ಟ್ 26ರಂದು ವಿವಾಹವಾಗಿದ್ದರು.
ಈ ದಂಪತಿಗೆ ಶೌರ್ಯ ಎಂಬ ಪುತ್ರ ಕೂಡ ಇದ್ದಾನೆ. ಬಹಳ ಮುದ್ದಾಗಿದ್ದ ಈ ಕುಟುಂಬದಲ್ಲಿ ಸ್ಪಂದನಾ ಅವರ ನಿಧನವು ಬರಸಿಡಿಲಿನಂತೆ ಎರಗಿತ್ತು. ಸ್ಪಂದನಾ ಅವರು 2023ರ ಆಗಸ್ಟ್ 6ರಂದು ಬ್ಯಾಕಾಂಕ್ ಪ್ರವಾಸದಲ್ಲಿದ್ದಾಗ ಹೃದಯಾಘಾತದಿಂದ ನಿಧನರಾದರು. ಆಗಸ್ಟ್ 9ರಂದು ಸ್ಪಂದನಾ ಅಂತ್ಯಕ್ರಿಯೆ ಬೆಂಗಳೂರಿನ ಹರಿಶ್ಚಂದ್ರ ಘಾಟ್‌ನಲ್ಲಿ ನೆರವೇರಿತ್ತು. ಸ್ಪಂದನಾ ಅವರು ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಮ್ ಅವರ ಪುತ್ರಿ.




