Ad imageAd image

ಏಕದಿನ ಕ್ರಿಕೆಟ್: 25 ಓವರ್ ಗೆ ಹೊಸ ಚೆಂಡಿನ ಬಳಕೆ  ನಿಯಮ ಎಷ್ಟು ಸರಿ?

Bharath Vaibhav
ಏಕದಿನ ಕ್ರಿಕೆಟ್: 25 ಓವರ್ ಗೆ ಹೊಸ ಚೆಂಡಿನ ಬಳಕೆ  ನಿಯಮ ಎಷ್ಟು ಸರಿ?
WhatsApp Group Join Now
Telegram Group Join Now

ಆಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ(ಐಸಿಸಿ) ಏಕದಿನ ಕ್ರಿಕೆಟ್ ನಲ್ಲಿ ಒಂದು ಮಹತ್ವದ ನಿಯಮ ಬದಲಾವಣೆಗೆ ಮುಂದಾಗಿದೆ ವರದಿಗಳು ಬರುತ್ತಿವೆ. ಏಕದಿನ ಕ್ರಿಕೆಟ್ ನಲ್ಲಿ ಎರಡನೇ ಹೊಸ ಚೆಂಡು ಬಳಸಲು ಅವಕಾಶ ನೀಡುವುದೇ ಹೊಸ ನಿಯಮ  ಎನ್ನಲಾಗುತ್ತಿದೆ.

50 ಓವರುಗಳ ಏಕದಿನ ಕ್ರಿಕೆಟ್ ನಲ್ಲಿ ಸದ್ಯದ ನಿಯಮದಂತೆ ಈಡೀ 50 ಓವರುಗಳಿಗೆ ಒಂದೇ ಚೆಂಡು ಬಳಸಲು ಅವಕಾಶ ಇದೆ. ಇನ್ನು ಮುಂದೆ ಅಂದುಕೊಂಡಂತೆ ಐಸಿಸಿ ನಿಯಮ ಬದಲಾವಣೆ ಮಾಡಿದರೆ ತಲಾ 25 ಓವರುಗಳಿಗೆ ಒಂದು ಚೆಂಡು ಬಳಸುವುದಾಗಿದೆ. ಒಂದೆಡೆ ಐಸಿಸಿ ಈ ನಿಯಮ ಬದಲಾವಣೆಯಿಂದ ಬೌಲರುಗಳಿಗೆ ಅನುಕೂಲವಾಗಲಿದೆ ಎಂದು ಹೇಳಿಕೊಂಡಿದೆ. ಆದರೆ  ಇದನ್ನು ಸ್ವತ: ಕೆಲವು ಬೌಲರುಗಳೇ ವಿರೋಧಿಸಿದ್ದಾರೆ.

ಹಾಗೇ ನೋಡಿದರೆ ಏಕದಿನ ಕ್ರಿಕೆಟ್ ನಲ್ಲಿ ಎರಡು ಹೊಸ ಚೆಂಡುಗಳು ಅಗತ್ಯವೇ ಇಲ್ಲ. ಟೆಸ್ಟ್ ಕ್ರಿಕೆಟ್ ನಲ್ಲಿ ಈ ನಿಯಮದ ಪ್ರಕಾರ 80 ಓವರುಗಳ ನಂತರ ಹೊಸ ಚೆಂಡು ತೆಗೆದುಕೊಳ್ಳಲು ಅವಕಾಶ  ಇದೆ. ಅಂದರೆ ಚೆಂಡು 80 ಓವರುಗಳ ನಂತರ ತನ್ನ ಮೂಲ ಸ್ವರೂಪವನ್ನು ಕಳೆದುಕೊಂಡು ಆಡಲು ಅಗತ್ಯವಿರುವುದಿಲ್ಲ ಎಂದು  ಈ ನಿಮಯದ ಸಾರ. ಹೀಗಿರುವಾಗ ಏಕದಿನ ಕ್ರಿಕೆಟ್ ನಲ್ಲಿ 25 ಓವರುಗಳಾಗುವಷ್ಟರಲ್ಲಿ ಚೆಂಡು ತನ್ನ ಸ್ವರೂಪ ಕಳೆದುಕೊಳ್ಳತ್ತದೇಯೇ?  ಎಂಬ ಪ್ರಶ್ನೆ ಕಾಡತ್ತದೆ.

ಚೆಂಡು ಹಳೆಯದಾದಗಲೇ ಬೌಲರುಗಳಿಗೆ ಸ್ವೀಂಗ್ ಮಾಡಲು ಅನುಕೂಲ.  ಅಲ್ಲದೇ ಹಳೆಯ ಚೆಂಡಿನಿಂದ ರನ್ ನಿಯಂತ್ರಣವೂ ಸಾಧ್ಯ. ಹೀಗಿರುವಾಗ ೇಕದಿನ ಕ್ರಿಕೆಟ್ ನಲ್ಲಿ 25 ಓವರ್ ಗೆ ಚೆಂಡು ಬದಲಿಸಿದರೆ ಕ್ರಿಕೆಟ್ ಸ್ವರೂಪ ಮತ್ತಷ್ಟು ಬಿಗಡಾಯಿಸಿ ಮತ್ತಷ್ಟು ರನ್ ಗಳು ಹರಿಯುವ ನಿರೀಕ್ಷೆ ಇದೆ. ಐಸಿಸಿ ಸುಮ್ಮನೇ ಬೌಲರುಗಳಿಗೆ ನೆರವಾಗುವ ಸುಳ್ಳು ಉದ್ದೇಶ ಮುಂದೆ ಮಾಡಿಕೊಂಡು ಮತ್ತೇ ಬ್ಯಾಟ್ಸಮನ್ ಗಳಿಗೆ ಸಹಾಯ ಮಾಡುವ ಹಾಗೂ ಕ್ರಿಕೆಟ್ ಅನ್ನು ಮತ್ತಷ್ಟು ಮನರಂಜನೆ, ಹೊಡಿ, ಬಡಿ ಆಟ ಮಾಡುವ ಹುನ್ನಾರ  ಇದೆ ಎಂಬುದು ಕ್ರಿಕೆಟ್ ಅಭಿಮಾನಿಗಳ ಆರೋಪ.

25 ಓವರುಗಳಿಗೆ ಚೆಂಡು ಬದಲಾದರೆ ಹೊಸ ಚೆಂಡು ಮತ್ತಷ್ಟು ಹಾರ್ಡ್ ಗಟ್ಟಿಯಾಗಿರುವುದರಿಂದ ಬೌಲರುಗಳಿಗೆ ಸ್ವಿಂಗ್ ಸಿಗುವುದಿಲ್ಲ ಒಂದು. ಮತ್ತೊಂದು ಚೆಂಡು ಹಾರ್ಡ್ ಇರುವುದರಿಂದ ರನ್ ಮಳೆ ಸುರಿಸಲು ಬ್ಯಾಟ್ಸಮನ್ ಗಳಿಗೆ ಸಲೀಸು. ಹೀಗಾಗಿ ಐಸಿಸಿ  ಏಕದಿನ ಕ್ರಿಕೆಟ್ ನಲ್ಲಿ ಮಾಡಲು ಬಯಸಿರುವ ನಿಯಮ ಬದಲಾವಣೆಯನ್ನು ಕೈ ಬಿಡುವುದೇ ಕ್ರಿಕೆಟ್ ಗೆ ಒಳಿತು ಎನ್ನಲಾಗುತ್ತಿದೆ.

WhatsApp Group Join Now
Telegram Group Join Now
Share This Article
error: Content is protected !!