Ad imageAd image

ಕ್ರಿಕೆಟ್: ಯಾವ ಆಟಗಾರರಿಗೆ ಎಷ್ಟು ಸಂಭಳ

Bharath Vaibhav
ಕ್ರಿಕೆಟ್: ಯಾವ ಆಟಗಾರರಿಗೆ ಎಷ್ಟು ಸಂಭಳ
WhatsApp Group Join Now
Telegram Group Join Now

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) 2024-25ರ ವಾರ್ಷಿಕ ಆಟಗಾರರ ಒಪ್ಪಂದದ ಪಟ್ಟಿಯನ್ನು ಸೋಮವಾರ (ಇಂದು) ಬಿಡುಗಡೆ ಮಾಡಿದೆ. ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ಬಿಸಿಸಿಐ ಒಪ್ಪಂದದ ಪಟ್ಟಿಗೆ ಮರು ಸೇರ್ಪಡೆಯಾಗಿದ್ದಾರೆ.

ಕಳೆದ ಋತುವಿನಲ್ಲಿ ದೇಶಿಯ ಲೀಗ್​ ಆಡದ ಕಾರಣ ಇವರಿಬ್ಬರನ್ನೂ ಕೇಂದ್ರ ಒಪ್ಪಂದದ ಪಟ್ಟಿಯಿಂದ ಕೈಬಿಡಲಾಗಿತ್ತು. ಸದ್ಯ ಈ ಇಬ್ಬರು ಉತ್ತಮ ಫಾರ್ಮನಲ್ಲಿದ್ದು ಇವರನ್ನು ಮರಳಿ ಗುತ್ತಿಗೆ ಪಟ್ಟಿಗೆ ಸೇರಿಸಲಾಗಿದೆ. ಇದಲ್ಲದೆ, ಅನೇಕ ಯುವ ಆಟಗಾರರ ಅದೃಷ್ಟವೂ ಖುಲಾಯಿಸಿದೆ. ಆರ್​ಸಿಬಿಯ ನಾಯಕ ಸೇರಿ ಸ್ಫೋಟಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ಕೂಡ ಬಿಸಿಸಿಐನ ಕೇಂದ್ರ ಒಪ್ಪಂದ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ, ಗ್ರೇಡ್-ಎ ಪ್ಲಸ್ ಪಟ್ಟಿಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ.

A+ ವಿಭಾಗದಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ, ಜಸ್ಪ್ರೀತ್​ ಬುಮ್ರಾ ಮುಂದುವರೆದಿದ್ದಾರೆ. ಅಂತರಾಷ್ಟ್ರೀಯ ಟಿ20 ಸ್ವರೂಪದಿಂದ ನಿವೃತ್ತಿ ಪಡೆದಿದ್ದರು ರೋಹಿತ್, ಕೊಹ್ಲಿ, ಜಡೇಜಾ ಎ ಪ್ಲಸ್​ ವಿಭಾಗದಲ್ಲಿ ಮುಂದುವರೆದಿದ್ದಾರೆ. ಉಳಿದಂತೆ ಈ ಒಪ್ಪಂದದಲ್ಲಿ ಒಟ್ಟು 24 ಆಟಗಾರರನ್ನು ಸೇರಿಸಲಾಗಿದೆ.

A ವಿಭಾಗಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಶುಭಮನ್ ಗಿಲ್, ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್ ಮತ್ತು ರಿಷಭ್ ಪಂತ್.

B ವಿಭಾಗ: ಸೂರ್ಯಕುಮಾರ್​ ಯಾದವ್​, ಕುಲ್ದೀಪ್​ ಯಾದವ್​, ಅಕ್ಷರ್​ ಪಟೇಲ್​, ಯಶಸ್ವಿ ಜೈಸ್ವಾಲ್​, ಶ್ರೇಯಸ್​ ಅಯ್ಯರ್​ ಇದ್ದಾರೆ.

C ವಿಭಾಗರಿಂಕು ಸಿಂಗ್, ತಿಲಕ್ ವರ್ಮಾ, ರುತುರಾಜ್ ಗಾಯಕ್ವಾಡ್, ಶಿವಂ ದುಬೆ, ರವಿ ಬಿಷ್ಣೋಯ್, ವಾಷಿಂಗ್ಟನ್ ಸುಂದರ್, ಮುಖೇಶ್ ಕುಮಾರ್, ಸಂಜು ಸ್ಯಾಮ್ಸನ್, ಅರ್ಶ್ದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ರಜತ್ ಪಾಟಿದಾರ್, ಧ್ರುವ್ ಜುರೆಲ್, ಸರ್ಫರಾಜ್ ಖಾನ್, ನಿತೀಶ್ ಕುಮಾರ್ ರೆಡ್ಡಿ, ಇಶಾನ್ ಕಿಶನ್, ಅಭಿಷೇಕ್ ಶರ್ಮಾ, ಆಕಾಶ್ ದೀಪ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ.

ಯಾವ ವಿಭಾಗದ ಆಟಗಾರರಿಗೆ ಎಷ್ಟು ಸಂಬಳ ಸಿಗುತ್ತದೆ?

A+ ವಿಭಾಗ₹7 ಕೋಟಿ ರೂಪಾಯಿ

A ವಿಭಾಗ₹5 ಕೋಟಿ

B ವಿಭಾಗ₹3 ಕೋಟಿ

C ವಿಭಾಗ₹1 ಕೋಟಿ

WhatsApp Group Join Now
Telegram Group Join Now
Share This Article
error: Content is protected !!