ಇಂಡಿಯನ್ ಪ್ರೀಮಿಯರ್ ಲೀಗ್ (IPL)ನ ಹೊಸ ಸೀಸನ್ ಪ್ರಾರಂಭವಾಗಲು ಇನ್ನು 4 ದಿನಗಳು ಮಾತ್ರ ಬಾಕಿ. ಐಪಿಎಲ್‌ನಲ್ಲಿ ಭಾಗಿಯಾಗುತ್ತಿರುವ ಎಲ್ಲಾ 10 ಫ್ರಾಂಚೈಸಿಗಳು ಈಗಾಗಲೇ ತಮ್ಮ ನಾಯಕರನ್ನು ಘೋಷಿಸಿವೆ. ಕೆಲವು ಫ್ರಾಂಚೈಸಿಗಳು ಅನುಭವಿಗಳಿಗೆ ಮಣೆ ಹಾಕಿದರೆ, ಇನ್ನು ಕೆಲವು ಫ್ರಾಂಚೈಸಿಗಳು ಹೊಸಬರಿಗೆ ಹೊಣೆ ವಹಿಸಿವೆ.
ಅದರಲ್ಲೂ ಕೆಲವು ತಂಡಗಳು ಮೆಗಾ ಹರಾಜಿನಲ್ಲಿ ನಾಯಕತ್ವದ ಗುಣವಿರುವ ಆಟಗಾರರನ್ನು ತಂಡಕ್ಕೆ ಕರೆತರಲು ಭಾರಿ ಹಣ ಖರ್ಚು ಮಾಡಿವೆ. ಹಾಗಾದರೆ, ಈ ಋತುವಿನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಾಯಕ ಯಾರು?, ಅತಿ ಕಡಿಮೆ ಸಂಭಾವನೆ ಪಡೆಯುತ್ತಿರುವ ನಾಯಕ ಯಾರು ಎಂದು ಇದೀಗ ತಿಳಿಯೋಣ.
ರಿಷಭ್ ಪಂತ್: ಇವರು 2025ರ ಅತ್ಯಂತ ದುಬಾರಿ ನಾಯಕ. ಹರಾಜಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ಪಂತ್‌ರನ್ನು 27 ಕೋಟಿ ರೂ.ಗೆ ಖರೀದಿಸಿದೆ. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರ ಎಂಬ ದಾಖಲೆಯನ್ನೂ ನಿರ್ಮಿಸಿದ್ದಾರೆ. ಈ ಋತುವಿನಲ್ಲಿ ಎಲ್‌ಎಸ್‌ಜಿಯ ನಾಯಕರಾಗಿ ಕೆಲಸ ಮಾಡಲಿದ್ದಾರೆ.
ಶ್ರೇಯಸ್ ಅಯ್ಯರ್: ಕಳೆದ ಆವೃತ್ತಿಯಲ್ಲಿ ಕೆಕೆಆರ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿ ಚಾಂಪಿಯನ್ ಪಟ್ಟಕ್ಕೇರಿಸಿದ್ದ ಶ್ರೇಯಸ್ ಅಯ್ಯರ್ ಅವರನ್ನು ಈ ಬಾರಿ 26.75 ಕೋಟಿ ರೂ.ಗೆ ಪಂಜಾಬ್ ಕಿಂಗ್ಸ್ ಖರೀದಿಸಿದೆ. ಇದು ಐಪಿಎಲ್ ಇತಿಹಾಸದಲ್ಲಿ ಎರಡನೇ ಅತ್ಯಧಿಕ ಬೆಲೆಯಾಗಿದ್ದು, ಅಯ್ಯರ್‌ರನ್ನು ತಂಡದ ನಾಯಕನನ್ನಾಗಿಯೂ ನೇಮಿಸಲಾಗಿದೆ.
ಪ್ಯಾಟ್ ಕಮಿನ್ಸ್: ಸನ್‌ರೈಸರ್ಸ್ ತಂಡ ಪ್ಯಾಟ್ ಕಮ್ಮಿನ್ಸ್ ಅವರನ್ನು 18 ಕೋಟಿ ರೂ.ಗೆ ಉಳಿಸಿಕೊಂಡಿದೆ. ಈ ಋತುವಿನಲ್ಲಿಯೂ ಅವರು ನಾಯಕನಾಗಿ ಮುಂದುವರಿಯುತ್ತಿದ್ದಾರೆ.
ರಾಜಸ್ಥಾನ ರಾಯಲ್ಸ್(RR): ಸಂಜು ಸ್ಯಾಮ್ಸನ್ ರಾಜಸ್ಥಾನ ರಾಯಲ್ಸ್ ತಂಡದ ನಾಯಕರಾಗಿ ಮುಂದುವರೆದಿದ್ದಾರೆ. ಇವರು 18 ಕೋಟಿ ರೂ.ಗಳನ್ನು ಪಡೆಯುತ್ತಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ (CSK): ಋತುರಾಜ್ ಗಾಯಕ್ವಾಡ್ ಸಿಎಸ್‌ಕೆ ನಾಯಕನಾಗಿ ಮುಂದುವರೆದಿದ್ದು, ಇವರೂ ಕೂಡ 18 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ.
ಗುಜರಾತ್ ಟೈಟಾನ್ಸ್ (GT): ಶುಭಮನ್ ಗಿಲ್ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯ ನಾಯಕರಾಗಿ ಮುಂದುವರೆದಿದ್ದಾರೆ. ಗಿಲ್ 16.5 ಕೋಟಿ ರೂ.ಗೆ ರಿಟೇನ್ ಆಗಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ (DC): ಈ ಆವೃತ್ತಿಗೆ ಹೊಸ ನಾಯಕನನ್ನು ನೇಮಿಸಿದ ಫ್ರಾಂಚೈಸಿಗಳಲ್ಲಿ ಡೆಲ್ಲಿ ಕೂಡ ಒಂದು. ದೆಹಲಿ ತಂಡ ಅಕ್ಷರ್ ಪಟೇಲ್ ಅವರನ್ನು ಹೊಸ ನಾಯಕನನ್ನಾಗಿ ನೇಮಿಸಿದೆ. ₹16.50 ಕೋಟಿ ರೂ.ಗೆ ಅಕ್ಷರ್ ಅವರನ್ನು ಡೆಲ್ಲಿ ಖರೀದಿಸಿದೆ.
ಮುಂಬೈ ಇಂಡಿಯನ್ಸ್ (MI): ಹಾರ್ದಿಕ್ ಪಾಂಡ್ಯ ಮುಂಬೈ ತಂಡದ ನಾಯಕನಾಗಿ ಮುಂದುವರೆದಿದ್ದಾರೆ. ಮುಂಬೈ ಪಾಂಡ್ಯರನ್ನು 16.35 ಕೋಟಿ ರೂ.ಗೆ ಉಳಿಸಿಕೊಂಡಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB): ಈ ಬಾರಿಯೂ ಹೊಸ ನಾಯಕನನ್ನು ಆರ್ಸಿಬಿ ನೇಮಿಸಿದೆ. 18ನೇ ಆವೃತ್ತಿಯಲ್ಲಿ ಯುವ ಆಟಗಾರ ರಜತ್ ಪಟಿದಾರ್ ಅವರನ್ನು ನೂತನ ನಾಯಕನನ್ನಾಗಿ ಮಾಡಿದೆ. ಅಲ್ಲದೇ 11 ಕೋಟಿ ರೂ.ಗಳಿಗೆ RCB ರಿಟೇನ್ ಮಾಡಿಕೊಂಡಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್): ನಾಯಕ ಅಜಿಂಕ್ಯ ರಹಾನೆ ಈ ಐಪಿಎಲ್‌ನಲ್ಲಿ ಅತಿ ಕಡಿಮೆ ಸಂಭಾವನೆ ಪಡೆಯುತ್ತಿರುವ ನಾಯಕ. ಮೆಗಾ ಹರಾಜಿನಲ್ಲಿ ರಹಾನೆ ಮಾರಾಟವಾಗದೇ ಉಳಿದಿದ್ದರು. ಬಳಿಕ ರ್ಯಾಪಿಡ್ ಸುತ್ತಿನಲ್ಲಿ, ಕೋಲ್ಕತ್ತಾ 1.5 ಕೋಟಿ ರೂ. ಮೂಲ ಬೆಲೆಗೆ ಖರೀದಿಸಿತು. ರಹಾನೆ ಹಿರಿತನವನ್ನು ಗಮನದಲ್ಲಿಟ್ಟುಕೊಂಡು ಕೆಕೆಆರ್ ಅವರನ್ನು ನಾಯಕನನ್ನಾಗಿ ನೇಮಿಸಿದೆ.