
——————————————————————————ಅಭಿಮಾನಿಗಳಲ್ಲಿ ಬಿಸಿ ಬಿಸಿ ಚರ್ಚೆ

ಖ್ಯಾತ ಬಾಲಿವುಡ್ ನಟ ಹೃತಿಕ್ ರೋಷನ್ ಹಾಗೂ ನಟಿ ಕಿಯಾರಾ ಅಡ್ವಾಣಿ ವಾರ್-2 ಚಿತ್ರದಲ್ಲಿ ಕಿಸ್ಸಿಂಗ್ ಸೀನ್ ನಲ್ಲಿ ಭಾಗಿಯಾಗಿದ್ದು, ವಾರ್-2 ಚಿತ್ರದ ಟ್ರೇಲರ್ ನಲ್ಲಿ ಕಂಡು ಬಂದಿದ್ದು, ಚಿತ್ರ ಅಭಿಮಾನಿಗಳು ಬಿಸಿ ಬಿಸಿ ಚರ್ಚೆಯಲ್ಲಿ ತೊಡಗಿದ್ದಾರೆ.ಈ ಇಬ್ಬರ ನಡುವೆ 18 ವರ್ಷಗಳ ಅಂತರವಿದ್ದು, ಕಿಸ್ಸಿಂಗ್ ಸೀನ್ ಗಳಲ್ಲಿ ಭಾಗಿಯಾದ ಬಗ್ಗೆ ಅಭಿಮಾನಿಗಳು ಬಿರುಸಿನ ಚರ್ಚೆಗಳನ್ನು ನಡೆಸಿದ್ದಾರೆ. ಇಷ್ಟು ಚಿಕ್ಕ ನಟಿಯೊಂದಿಗೆ ಕಿಸ್ಸಿಂಗ್ ಸೀನ್ ಗಳಲ್ಲಿ ನಟಿಸಿದ್ದು, ಸರಿಯೇ ಎಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ. ಈಚೆಗೆ ಸಲ್ಮಾನ್ ಖಾನ್ ಹಾಗೂ ರಶ್ಮಿಕಾ ಮಂದಣ್ಣ ಚಿತ್ರವೊಂದರಲ್ಲಿ ಈ ರೀತಿಯ ಕಿಸ್ಸಿಂಗ್ ಸೀನ್ ಗಳಲ್ಲಿ ಭಾಗಿಯಾದಾಗಲೂ ಇಂತಹುದೇ ಚರ್ಚೆಗಳು ನಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.





