Ad imageAd image

ಹುಬ್ಬಳಿ ಮರ್ಯಾದಾ ಹತ್ಯೆ:ಗೋಪಾಲ ಎಲ್ ನಾಟೇಕರ್ ಖಂಡನೆ

Bharath Vaibhav
ಹುಬ್ಬಳಿ ಮರ್ಯಾದಾ ಹತ್ಯೆ:ಗೋಪಾಲ ಎಲ್ ನಾಟೇಕರ್ ಖಂಡನೆ
WhatsApp Group Join Now
Telegram Group Join Now

ಸೇಡಂ : ಹುಬ್ಬಳ್ಳಿ-ಧಾರವಾಡದ ಇನಾಂವೀರಾಪೂರ ಗ್ರಾಮದಲ್ಲಿ ಮಾನ್ಯ ಎಂಬ ಯುವತಿ ದಲಿತ ಯುವಕನನ್ನು ಪ್ರೀತಿಸಿ ಮದುವೆಯಾದಳು ಎಂಬ ಕಾರಣಕ್ಕೆ ಮಾನ್ಯಳ ತಂದೆ ಪ್ರಕಾಶಗೌಡ ಪಾಟೀಲ್, ಸಂಬಂಧಿಗಳಾದ ವೀರನಗೌಡ ಹಾಗೂ ಅರುಣಗೌಡ ಎಂಬುವವರು ಸೇರಿ ಯುವಕನ ಮನೆಯವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿ 7 ತಿಂಗಳ ಗರ್ಭಿಣಿ ಮಾನ್ಯಳನ್ನು ಕೊಲೆ ಮಾಡಿರುವ ಘಟನೆಯನ್ನು ಗೋಪಾಲ ಎಲ್ ನಾಟೇಕರ್ ವಕೀಲರು ಹಾಗೂ ತಾಲೂಕ ಅಧ್ಯಕ್ಷರು ಅಂಬೇಡ್ಕರ್ ಯುವ ಸೇನೆ ಸೇಡಂ ಅವರು ತೀವ್ರವಾಗಿ ಖಂಡಿಸಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ದಲಿತರ ಮೇಲೆ ಹಲ್ಲೆ, ಕಗ್ಗೋಲೆ, ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ. ರಾಜ್ಯ ಸರಕಾರ ಯಾವುದೇ ರೀತಿಯಿಂದ ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳು ನಡೆಯದಂತೆ ಸೂಕ್ತ ಕಾನೂನು ಕ್ರಮ ಜಾರಿಗೊಳಿಸಬೇಕೆಂದು ಒತ್ತಾಯಿಸಿದರೆ.

ಸ್ಥಳೀಯ ಪೊಲೀಸ್‌ ಅಧಿಕಾರಿಗಳು ಸಮಾಜ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಯವರು ಇಂತಹ ಪ್ರಕರಣಗಳಲ್ಲಿ ಸೂಕ್ತ ರಕ್ಷಣೆ ಕೊಡದೆ ನಿರ್ಲಕ್ಷ ವಹಿಸಿರುವುದೇ ಈ ಕೊಲೆಗೆ ಕಾರಣವಾಗಿದೆ.

ಮಾನ್ಯ ಪರವಾಗಿ ಸರ್ಕಾರ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್‌ಅನ್ನು ನೇಮಿಸಿ ಈ ಆರೋಪಿಗಳಿಗೆ ಯಾವುದೇ ರೀತಿಯ ಜಾಮೀನು ಸಿಗದಂತೆ ಮುತುವರ್ಜಿವಹಿಸಬೇಕು ಹಾಗೂ ಇಂತಹ ಘಟನೆಗೆ ಕಾರಣರಾಗುವಂತಹವರನ್ನು ಗಲ್ಲುಶಿಕ್ಷೆಗೆ ಒಳಪಡಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾನೂನನ್ನು ರೂಪಿಸಬೇಕು.

ಅಲ್ಲದೆ ಮುಂದೆ ಇಂತಹ ಘಟನೆಗಳು ನಡೆಯದಂತೆ ಸರ್ಕಾರ ಮುತುವರ್ಜಿ ವಹಿಸಿ. ಮೃತ/ ನೊಂದ ದಲಿತ ಕುಟುಂಬಕ್ಕೆ ಸರ್ಕಾರ ವತಿಯಿಂದ 1 ಕೋಟಿ ಪರಿಹಾರ, ಮತ್ತು ದೌರ್ಜನ್ಯ ಪ್ರಕರಣಕ್ಕೆ ಅನುಗುಣವಾಗಿ ಸರಕಾರಿ ನೌಕರಿ ನೀಡಬೇಕು.

ಯುವಕನ ಕುಟುಂಬಕ್ಕೆ ಸೂಕ್ತ ಪೊಲೀಸ್‌ ರಕ್ಷಣೆ ಕೊಡಬೇಕೆಂದು ಗೋಪಾಲ ಎಲ್ ನಾಟೇಕರ್ ಅವರು ಪತ್ರಿಕಾ ಹೇಳಿಕೆ ಮೂಲಕ ಒತ್ತಾಯಿಸಿದ್ದಾರೆ.

ವರದಿ : ವೆಂಕಟಪ್ಪ ಕೆ ಸುಗ್ಗಾಲ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!