ಚಾಮರಾಜನಗರ:-ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿಗೊಳಿಸಲು ಕರ್ನಾಟಕ ಸರ್ಕಾರವನ್ನು ಒತ್ತಾಯಿಸಿ ಗಡಿನಾಡ ಜಿಲ್ಲೆ ಚಾಮರಾಜನಗರದಲ್ಲಿ ಬೃಹತ್ ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಯಿತು.
ಕೊಳ್ಳೇಗಾಲ ಪಟ್ಟಣದಲ್ಲಿ ಇರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಯಳಂದೂರು ಮಾರ್ಗವಾಗಿ ಚಾಮರಾಜನಗರದ ಜಿಲ್ಲಾ ಕಚೇರಿಯವರೆಗೂ ಸುಮಾರು 40 ಕಿಲೋ ಮೀಟರ್ ದೂರ ಬೃಹತ್ ಬ್ರೈಕ್ ರ್‍ಯಾಲಿಯನ್ನು ನಡೆಸಲಾಯಿತು
ಈ ಸಂದರ್ಭದಲ್ಲಿ ಮಾದಿಗ ಸಮುದಾಯದ ಜಿಲ್ಲಾ ಅಧ್ಯಕ್ಷರಾದ ಅರಕಲವಾಡಿ ನಾಗೇಂದ್ರ ಮಾತಾಡಿ ,ಸುಪ್ರೀಂ ಕೋರ್ಟ್ ತೀರ್ಮಾನದಂತೆ ಒಳ ಮೀಸಲಾತಿಯನ್ನು ರಾಜ್ಯ ಸರ್ಕಾರಕ್ಕೆ ನೀಡಬೇಕು.ಆದರೆ ಕರ್ನಾಟಕ ರಾಜ್ಯ ಸರ್ಕಾರ ಕಣ್ಣು ಮುಚ್ಚಾಲೆ ಆಟವನ್ನು ಆಡುತ್ತಿದೆ ದಲಿತರ ಪರ ದಲಿತ ಶೋಷಿತರ ಪರ ಎಂದು ಹೆಸರುವಾಸಿಯಾಗಿರುವ ಸಿದ್ದರಾಮಯ್ಯನವರು ಒಳ ಮೀಸಲಾತಿಯನ್ನು ಜಾರಿ ಮಾಡಲು ವೀನಾವೇಶ ಮಾಡುತ್ತಿದ್ದಾರೆ
ಇನ್ನಾದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಒಳ ಮೀಸಲಾತಿಯನ್ನು ಜಾರಿ ಮಾಡದಿದ್ದರೆ ಮಂತ್ರಿಗಳು ಮುಖ್ಯ ಮಂತ್ರಿಗಳು ಯಾವುದೇ ಕಾರ್ಯಕ್ರಮಗಳನ್ನ ನಡೆಸಲು ಬಿಡುವುದಿಲ್ಲ, ಹಾಗೂ ಒಳ ಮೀಸಲಾತಿಯನ್ನ ಜಾರಿಗೊಳಿಸದೆ ಯಾವುದೇ ಸರ್ಕಾರಿ ಬ್ಲಾಕ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬಾರದು
ನಮ್ಮ ಪಕ್ಕದ ತೆಲಂಗಾಣ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕೆ ಬಂದಿದ್ದೆ ನಾವು ಒಳ ಮೀಸಲಾತಿಜಾರಿ ಮಾಡದೇ ಯಾವುದೆಕಾರಣಕ್ಕೂ ಬ್ಯಾಕ್ ಲಾಗ್ ಹುದ್ದೆ ಜಾರಿ ಮಾಡುವುದಿಲ್ಲ ಎಂದು ತಿಳಿಸಿದೆ ಇದೇತರ ನಮ್ಮ ರಾಜ್ಯ ಸರ್ಕಾರ ಮಾಡಬೇಕು.ಎಂದರು ತಿಳಿಸಿದರು,
ಈ ಸಂದರ್ಭದಲ್ಲಿ ವಕೀಲರದ ಎಸ್ ಅರುಣ್ ಕುಮಾರ್ ಬೂದಿತಿಟ್ಟು ರಾಜೇಂದ್ರ, ಮನು ದೇಮಹಳ್ಳಿ ಹಾಗೂ ಮಾದಿಗ ಸಮುದಾಯ ಮುಖಂಡರುಗಳು ಹಾಜರಿದ್ದರು.
ವರದಿ :ಸ್ವಾಮಿ ಬಳೇಪೇಟೆ