ರಣಜಿ ಕ್ರಿಕೆಟ್: ಕರುಣ್ ನಯ್ಯರ, ಸಮರನ್ ರವಿಚಂದ್ರನ್ ದ್ವಿಶತಕ
ತಿರುವನಂತಪುರಂ: ಕರ್ನಾಟಕ ಕ್ರಿಕೆಟ್ ತಂಡವು ಇಲ್ಲಿ ನಡೆದಿರುವ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಎಲೈಟ್ ‘ಬಿ’ ಗುಂಪಿನ ಮೂರನೇ ಲೀಗ್ ಪಂದ್ಯದಲ್ಲಿ ಕೇರಳ ವಿರುದ್ಧ ಬೃಹತ್ ಮೊದಲ ಇನ್ನಿಂಗ್ಸ್ ಮೊತ್ತ ಕೂಡಿ ಹಾಕಲು ಯಶಸ್ವಿಯಾಯಿತು.

ಮಂಗಲಪುರಂನ ಕೆಸಿಎ ಕ್ರಿಕೆಟ್ ಮೈದಾನದಲ್ಲಿ ಮೂರನೇ ದಿನದ ಆಟ ಮುಗಿದಾಗ ಕೇರಳ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 3 ವಿಕೆಟ್ ಗೆ 21 ರನ್ ಗಳಿಸಿತ್ತು. ಕರ್ನಾಟಕ ಮೊದಲ ಇನ್ನಿಂಗ್ಸ್ ನಲ್ಲಿ 5 ವಿಕೆಟ್ ಗೆ 586 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. ಕರ್ನಾಟಕದ ಪರ ಕರುಣ್ ನಯ್ಯರ್ 233 ಹಾಗೂ ಸಮರನ್ ರವಿಚಂದ್ರನ್ 222 ರನ್ ಗಳಿಸಿದರು.
ಸ್ಕೋರ್ ವಿವರ
ಕರ್ನಾಟಕ ಮೊದಲ ಇನ್ನಿಂಗ್ಸ್ 5 ವಿಕೆಟ್ ಗೆ 586 ಡಿಕ್ಲೇರ್
ಕರುಣ್ ನಯ್ಯರ್ 233( 389 ಎಸೆತ, 25 ಬೌಂಡರಿ, 2 ಸಿಕ್ಸರ್)
ಸಮರನ್ ರವಿಚಂದ್ರನ್ 222 ( 390 ಎಸೆತ, 16 ಬೌಂಡರಿ, 3 ಸಿಕ್ಸರ್)
ಕೃಷ್ಣನ್ ಶ್ರೀಜಿತ್ 65 ( 110 ಎಸೆತ, 10 ಬೌಂಡರಿ)
ಕೇರಳ ಮೊದಲ ಇನ್ನಿಂಗ್ಸ್ 3 ವಿಕೆಟ್ 21
ವಿದ್ವತ್ ಕಾವೇರಪ್ಪ 7 ಕ್ಕೆ 2




