——————————ಬೇಡಕಿಹಾಳ ಗ್ರಾಮದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಆಯೋಜಿಸಿದ ಪ್ರವಚನ
——————————ಕಾರ್ಯಕ್ರಮ ದಲ್ಲಿ ಪ. ಪೂ.ಓಂ ಗುರೂಜಿಯಿಂದ ಅಧ್ಯಾತ್ಮ ನುಡಿ
ನಿಪ್ಪಾಣಿ: 84 ಲಕ್ಷ ಜೀವ ರಾಶಿಗಳಲ್ಲಿ ಶ್ರೇಷ್ಠವಾದ ಈ ಮಾನವ ಜನ್ಮದಲ್ಲಿ ಬಂದು ಅಧ್ಯಾತ್ಮ ಸತ್ಕಾರ್ಯದಲ್ಲಿ ತೊಡಗಿ ಜೀವನ ಪಾವನವನ್ನಾಗಿಸಿಕೊಳ್ಳಬೇಕು ಪ್ರಾಣಿ ಪಕ್ಷಿಗಳು ಸಹಿತ ಬದುಕು ಸಾಗಿಸುತ್ತವೆ ಆದರೆ ಮಾನವ ಇವುಗಳಿಗಿಂತಲೂ ಶ್ರೇಷ್ಠ ಏಕೆಂದರೆ ಮಾನವನಿಗೆ ದೇವರು ಅರಿವು ಪರಿಜ್ಞಾನ ಕಲ್ಪಿಸಿದ್ದಾನೆ.
ಆದ್ದರಿಂದ ಇರುವಷ್ಟು ದಿನ ಸತ್ಸಂಗ ಸತ್ಕಾರಿಯಾಗಿ ಮಾಡಿ ತನ್ನನ್ನು ತಾನು ಅರಿತುಕೊಳ್ಳಬೇಕೆಂದು ಕುಳವಳ್ಳಿ ಯೋಗಾಶ್ರಮದ ಪ ಪೂ ಓಂ ಗುರೂಜಿ ತಿಳಿಸಿದರು. ನಿಪ್ಪಾಣಿ ತಾಲೂಕಿನ ಬೇಡಕಿಹಾಳ ಗ್ರಾಮದಲ್ಲಿ ಬಸವೇಶ್ವರ ಯುವಕ ಮಂಡಳ ಸಮಸ್ತ ಲಿಂಗಾಯಿತ ಸಮಾಜದ ಸಂಯುಕ್ತಆಶ್ರಯ ದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಹಮ್ಮಿಕೊಂಡ ಆಧ್ಯಾತ್ಮಿಕ ಪ್ರಯೋಜನ ಕಾರ್ಯಕ್ರಮದಲ್ಲಿ ವ್ಯಕ್ತಪಡಿಸಿದರು ಪ್ರಾರಂಭದಲ್ಲಿ ಬಸವೇಶ್ವರ ಯುವಕ ಮಂಡಲ ವತಿಯಿಂದ ಶ್ರೀಗಳಿಗೆ ಫಲಪುಷ್ಪ ನೀಡಿ ಸನ್ಮಾನಿಸಲಾಯಿತು. ಭಕ್ತರಿಗೆ ಮಹಾಪ್ರಸಾದ ಹಂಚಲಾಯಿತು. ಪ್ರವಚನ ಕಾರ್ಯಕ್ರಮದಲ್ಲಿ ಬಸವೇಶ್ವರ ಯುವಕ ಮಂಡಳದ ಪದಾಧಿಕಾರಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.
ನಿಪ್ಪಾಣಿ: ಮಹಾವೀರ ಚಿಂಚಣೆ




