ಸಿಂಧನೂರು :ಅ ೩, ರಾಯಚೂರು ಜಿಲ್ಲೆಯ ಸಿಂಧನೂರು ನಗರದಲ್ಲಿ ನವಂಬರ್ ೧ ರಂದು ವ್ಯಕ್ತಿಯ ಶವ ಪತ್ತೆಯಾಗಿದೆ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ಘಟನೆ ಡಿವೈಎಸ್ಪಿ ಚಂದ್ರಶೇಖರ ಜಿ. ನಾಯಕ, ನಗರ ಪೋಲೀಸ ಠಾಣೆಯ ಪಿ.ಐ. ವೀರಾರೆಡ್ಡಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು.
ಪ್ರಭೀರ ತಂದೆ ಗಣೇಶ ಸರ್ದಾರ ೩೦. ಬಂಗಾಲಿ ಕ್ಯಾಂಪ ೨ ರ ನಿವಾಸಿ ಕೊಲೆಯಾದ ವ್ಯಕ್ತಿಯಾಗಿದ್ದಾನೆ ನಗರದ ಇಂದಿರಾ ನಗರದ ಕಬ್ರಸ್ಥಾನ್ ಹತ್ತಿರ ಇರುವ ಬಳ್ಳಾರಿ ಲೇಔಟ್ ನಲ್ಲಿ ಕೊಲೆ ಯಾಗಿದ್ದಾನೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಮೃತ ಪ್ರಭೀರ ತಂದೆ ಗಣೇಶ ನಗರಸಭೆ ಹತ್ತಿರ ಕಿರಾಣಿ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದ ದಿನಾಲು ಸಂಜೆ ಅಂಗಡಿ ಬಂದ ಮಾಡಿ ಬಂಗಾಲಿ ಕ್ಯಾಂಪ ೨ ರಲ್ಲಿರುವ ತನ್ನ ಮನೆಗೆ ಹೋಗುತ್ತಿದ್ದ ಗುರುವಾರ ಸಂಜೆ ಮನೆಗೆ ಬಾರದೆ ಪೋನ್ ಎತ್ತದೆ ಇರುವುದರಿಂದ ಅನುಮಾನಗೊಂಡು ಪೋಲೀಸ ಠಾಣೆಯಲ್ಲಿ ಕಾಣೆಯಾದ ಬಗ್ಗೆ ದೂರುನೀಡಿದ್ದರು
೨- ೩ ದಿನಗಳ ಹಿಂದೆಯೇ ಕೊಲೆಯಾಗಿದ್ದು ನವಂಬರ್ ೧ ನಗರದ ಬಳ್ಳಾರಿ ಲೇಓಟ್ ನ ಗೇಟ್ ಮುಂದೆ ಇತನ ಕೈ ಕಟ್ಟಿ ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಮುಂಜಾನೆ ಮಹಿಳೆಯರು ಶೌಚಾಲಯಕ್ಕೆ ಹೋದಾಗ ಘಟನೆ ಬೆಳಕಿಗೆ ಬಂದಿದೆ. ಸಿಂಧನೂರು ಪೊಲೀಸರು ಭೇಟಿ ನೀಡಿ, ಜಿಲ್ಲಾ ಶ್ವಾನ ಹಾಗೂ ಬೆರಳಚ್ಚು ತಂಡ ಬೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಆರಂಬಿಸಿದ್ದಾರೆ.
ವರದಿ: ಬಸವರಾಜ ಬುಕ್ಕನಹಟ್ಟಿ




