ಖಾಸಗಿ ಆಸ್ಪತ್ರೆಗಳ ಹಣ ಸುಲುಗೆಗೆ ಕಡಿವಾಣ ಹಾಕಬೇಕು..
ಸಾರ್ವಜನಿಕರಿಗೆ ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆ ಸಿಗುವಂತಾಗಲಿ..
ಬೆಳಗಾವಿ : ಜಿಲ್ಲೆಯಾದ್ಯಂತ ಖಾಸಗಿ ದವಾಖಾನೆ, ಸಣ್ಣಪುಟ್ಟ ಚಿಕಿತ್ಸಾ ಘಟಕ ಹಾಗೂ ಆಸ್ಪತ್ರೆಗಳಲ್ಲಿ ಆರೋಗ್ಯ ತಪಾಸಣಾ ದರವನ್ನು ಅತಿಯಾಗಿ ನಿಗದಿ ಮಾಡುತ್ತಿದ್ದು, ಬಡ, ಮಧ್ಯಮ ವರ್ಗದ ಜನತೆಗೆ ತುರ್ತು ಚಿಕಿತ್ಸೆಯ ಸಂದರ್ಭದಲ್ಲಿ ತುಂಬಾ ತೊಂದರೆಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಆರೋಗ್ಯ ಸೇವೆ ಸಿಗಬೇಕು, ಖಾಸಗಿ ಆಸ್ಪತ್ರೆಗಳು ತಮ್ಮ ತಪಾಸಣಾ ದರವನ್ನು ನಿಯಂತ್ರಣದಲ್ಲಿ ಇಟ್ಟಿರಬೇಕು ಎಂದು ಬೆಳಗಾವಿಯ ಮಾನವ ಹಕ್ಕುಗಳ ಹಾಗೂ ಭ್ರಷ್ಟಾಚಾರ ವಿರೋಧ ಸಂಸ್ಥೆ ವತಿಯಿಂದ ಬೆಳಗಾವಿ ನಗರ ಮತ್ತು ತಾಲೂಕು ಅಧ್ಯಕರಾದ ಮಹಾಂತೇಶ ಹುಲಿಕಟ್ಟಿ ಅವರು ಜಿಲ್ಲಾ ಆರೋಗ್ಯಾಧಿಕಾರಿಗಳ ಮೂಲಕ ಆರೋಗ್ಯ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ..
ಇತ್ತೀಚೆಗೆ ಅನಾರೋಗ್ಯದ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಾಂಕ್ರಾಮಿಕ ಕಾಯಿಲೆಗಳ ಹಾವಳಿ ಕೂಡಾ ಜನರನ್ನು ಚಿಂತೆಗೀಡು ಮಾಡಿವೆ, ಜನಸಂಖ್ಯೆಗೆ ಅನುಗುಣವಾಗಿ ಸರ್ಕಾರಿ ಆಸ್ಪತ್ರೆ ಹಾಗೂ ಆರೋಗ್ಯ ಕೇಂದ್ರಗಳ ಕೊರತೆ ಇರುವುದರಿಂದ ಜನರು ಖಾಸಗಿ ಆಸ್ಪತ್ರೆಗಳ ಕಡೆಗೆ ಮುಖ ಮಾಡುವರು, ಆಗ ತಪಾಸಣೆ, ಇತರೆ ಟೆಸ್ಟು, ಔಷದಿ ಮತ್ತು ಮಾತ್ರೆಗಳು ಎಂದು ತುಂಬಾ ಹಣ ನೀಡುವ ಪರಿಸ್ಥಿತಿ ಸಾಮಾನ್ಯ ಜನಟದ್ದಾಗಿದ್ದು ವಿಷಾದನೀಯ ಎನಿಸುತ್ತದೆ..
ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲಿಯೂ ನೀಡುವ ಸೇವೆಗಳಿಗೆ ಸರ್ಕಾರ ದರ ನಿಗದಿ ಮಾಡಿದಂತೆ ಈ ಖಾಸಗಿ ಆಸ್ಪತ್ರೆಗಳ ತಪಾಸಣೆ ಹಾಗೂ ಪರೀಕ್ಷೆಗಳಿಗೂ ದರ ನಿಗದಿ ಮಾಡಿದರೆ ಜನರಿಗೆ ಅನುಕೂಲ ಆಗುತ್ತದೆ ಎಂದು ಮನವಿಯಲ್ಲಿ ಕೇಳಿಕೊಳ್ಳಲಾಗಿದೆ.