Ad imageAd image
- Advertisement -  - Advertisement -  - Advertisement - 

ವೀರಭದ್ರ ದೇವರ ದರ್ಶನ ಪಡೆದ ನೂರಾರು ಭಕ್ತರು

Bharath Vaibhav
ವೀರಭದ್ರ ದೇವರ ದರ್ಶನ ಪಡೆದ ನೂರಾರು ಭಕ್ತರು
WhatsApp Group Join Now
Telegram Group Join Now

ಕಂದಗಲ್ : ಪೌರಾಣಿಕ ಹಾಗೂ ಐತಿಹಾಸಿಕ ಸ್ಥಾನಮಾನ ಪಡೆದ ಇಲಕಲ್ ತಾಲೂಕು ಕಂದಗಲ್ ಗ್ರಾಮದ ವೀರಭದ್ರ ದೇವರ ದೇವಸ್ಥಾನಕ್ಕೆ ಶ್ರಾವಣ ಮಾಸದ ನಿಮಿತ್ಯ ಪ್ರತಿದಿನ ದೂರದ ಊರುಗಳಿಂದ ನೂರಾರು ಭಕ್ತರು ಆಗಮಿಸಿ ಕ್ಷೆತ್ರಾಧಿಪತಿ ವೀರಭದ್ರ ದೇವರ ದರುಶನ ಪಡೆದು ಪುನೀತರಗುತ್ತಿದ್ದಾರೆ.


ಕಂದಗಲ್ ವೀರಭದ್ರ ದೇವರ ಭಕ್ತರು ಬಾಗಲಕೋಟ ವಿಜಯಪುರ ರಾಯಚೂರು ಕೊಪ್ಪಳ ಬಳ್ಳಾರಿ ಗದಗ್ ಧಾರವಾಡ ಜಿಲ್ಲೆಗಳಲ್ಲದೆ ಹೊರ ರಾಜ್ಯ ಗಳಲ್ಲಿಯೂ ಇದ್ದು ವರ್ಷದಲ್ಲಿ 2 ಸಲ ಶ್ರಾವಣ ಮಾಸ ಹಾಗೂ ವೀರಭದ್ರ ದೇವರ ಜಾತ್ರೆ ನೆಡೆಯುವ ಎಳ್ಳ ಅಮಾವಾಸ್ಯ ಸಂದರ್ಭದಲ್ಲಿ ಭಕ್ತರು ತಪ್ಪದೆ ಆಗಮಿಸಿ ಕ್ರತಾರ್ಥರಾಗುತ್ತಾರೆ ಶ್ರಾವಣ ಮಾಸದ ನಿಮಿತ್ಯ ಪ್ರತಿನಿತ್ಯ ವೀರಭದ್ರ ದೇವರಿಗೆ ರುದ್ರಾಭಿಷೇಕ ಪೂಜೆ ವಿಶೇಷ ಅಲಂಕಾರ ನೆಡೆಯುತ್ತಿದೆ
ಪಾಲಕಿ ನಂದಿಕೋಲ್ ಮೆರವಣಿಗೆ – ವೀರಭದ್ರ ದೇವರ ಪಾಲಕಿ ಉತ್ಸವ ಹಾಗೂ ನಂದಿಕೋಲ್ ಮೆರವಣಿಗೆ 26, ಸೋಮವಾರದಂದು ವಿಜೃಂಭಣೆಯಿಂದ ಜರುಗಲಿದೆ, ಬೆಳಿಗ್ಗೆ ಕಾಲ್ನಡಿಗೆ ಮೂಲಕ ಕ್ರಷ್ಣ ನದಿಯಿಂದ್ ತಂದು ಉದಕದಿಂದ ವೀರಭದ್ರ ದೇವರಿಗೆ ಅಭಿಷೇಕ್ ಮಹಾಮಂಗಲ, ಪ್ರಸಾದ ವಿತರಣೆ ನಂತರ ದೇವಸ್ಥಾನಕ್ಕೆ ಕಳಸರೋಹಣ ನೆರವೇರುವದು ನಂತರ ನಂದಿಕೋಲಿನ ಪೂಜೆ ಭಕ್ತರು ಹರಕೆ ತೀರಿಸುವ ಕಾರ್ಯಕ್ರಮ ಗಳು ನೆಡೆಯುತ್ತವೆ ಸಂಜೆ 5 ಘಂಟೆಗೆ ನಂದಿಕೋಲ್ ಮೆರವಣಿಗೆಯೊಂದಿಗೆ ವೀರಭದ್ರ ದೇವರ ಪಲ್ಲಕ್ಕಿ ಉತ್ಸವ ವೈಭವದಿಂದ್ ನೆಡೆಯುವದು ನಂದಿಕೋಲ್ ಹಿಡಿದ ಭಕ್ತರು ಹಲವಾರು ಚಮತ್ಕಾರಗಳನ್ನು ಪ್ರದರ್ಶಿಸುವರು

ವರದಿ : ದಾವಲ್ ಶೇಡಂ

WhatsApp Group Join Now
Telegram Group Join Now
Share This Article
error: Content is protected !!