ಹುಕ್ಕೇರಿ:- ಅಡಿವಿಸಿದ್ದೇಶ್ವರ ಮಠದಿಂದ ಹುಕ್ಕೇರಿ ಕೋರ್ಟ್ ಸರ್ಕಲ್ ವರೆಗೆ ಬ್ರಹತ್ ರ್‍ಯಾಲಿ
ಸಂಕೇಶ್ವರದ ಶ್ರೀ ದುರ್ದುಂಡೇಶ್ವರ ಖಾಸಗಿ ಕಾಯಿಪಲ್ಲೆ ಮಾರುಕಟ್ಟೆ ವರ್ಗಾವಣೆ.ಮಾರುಕಟ್ಟೆಯನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಎಪಿಎಂಸಿಗೆ ಸ್ಥಳಾಂತರಿಸಲು ಹೋರಾಟ,ಸಂಕೇಶ್ವರ ಪಟ್ಟಣದ ದುರ್ದುಂಡೇಶ್ವರ ತರಕಾರಿ ಮಾರುಕಟ್ಟೆ ಸುಮಾರು ವರ್ಷಗಳಿಂದ ವ್ಯಾಪಾರವನ್ನು ಮಾಡುತ್ತಾ ಬಂದಿದ್ದು
ಈಗ ತರಕಾರಿ ಬೆಳೆಯುವ ರೈತರು ಹೆಚ್ಚಾಗಿದ್ದು ಮಾರುಕಟ್ಟೆ ಚಿಕ್ಕದಾಗಿದ್ದು ವಾಹನ ನಿಲುಗಡೆ ಸಮಸ್ಯೆ ಮತ್ತು ರೈತರಿಂದ ವರ್ಷಕ್ಕೆ ಕೋಟಿಗಟ್ಟಲೆ ಲೂಟಿ ಮಾಡುತ್ತಿರುವ ಜಕಾತಿ ಏಜೆಂಟ್ರು ,ಜಕಾತಿ ವಸಲಿಗಾರರಿಂದ ರೈತರ ಮೇಲೆ ದಬ್ಬಾಳಿಕೆ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸುವುದು
ಈ ಮಾರುಕಟ್ಟೆ ನಗರದ ಮುಖ್ಯರಸ್ತೆಗೆ ಇರುವುದರಿಂದ ವಾಹನಗಳು ದಟ್ಟನೇಯಿಂದ ಸಾರ್ವಜನಿಕರಿಗೂ ಹಾಗೂ ಹೊರಗಡೆಯಿಂದ ಬರುವರಿಗೆ ಕೂಡ ತುಂಬಾ ತೊಂದರೆಯಾಗುತ್ತದೆ.ಹಲವಾರು ಸಮಸ್ಯೆಗಳು ರೈತರು ಅನುಭವಿಸುತ್ತಿದ್ದು ಹಳೆಯ ತರಕಾರಿ ಮಾರುಕಟ್ಟೆಯನ್ನು ಬಂದ್ ಮಾಡಿ ಹತ್ತಿರದಲ್ಲಿಯೇ ಇರುವ ಎಪಿಎಂಸಿಗೆ ವರ್ಗಾವಣೆ ಮಾಡಲೇಬೇಕು ಎಂಬ ಎಲ್ಲ ರೈತರ ಬೇಡಿಕೆ.ಎಪಿಎಂಸಿಗೆ ವರ್ಗಾವಣೆ ಆಗೋವರೆಗೆ ನಿರಂತರ ಹೋರಾಟ ಮಾಡುತ್ತಿವೆ ಎಂದು ಬೆಳಗಾವಿ ಜಿಲ್ಲಾ ರಾಜ್ಯಾಧ್ಯಕ್ಷರಾದ ಚೂನಪ್ಪಾ ಪೂಜೆರಿ ಹೇಳಿದ್ದಾರೆ.
ವರದಿ:-ಶಿವಾಜಿ ಎನ್ ಬಾಲೇಶಗೋಳ