ಕಾಗವಾಡ: ತನ್ನ ಹೆಂಡತಿಯನ್ನ ಕೊಲೆ ಮಾಡಿ ಅಪಘಾತ ಎಂದು ಬಿಂಬಿಸಲು ಹೋದ ನ್ಯಾಯವಾದಿ ಸೇರಿ ಮೂವರನ್ನು ಕಾಗವಾಡ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚೈತಾಲಿ ಪ್ರದೀಪ ಕಿರಣಗಿ 22 ವರ್ಷದ ವಯಸ್ಸಿನ ಮಹಿಳೆ ಮೃತ ದುರ್ದೈವಿಯಾಗಿದ್ದಾಳೆ.
ಭಾನುವಾರ ರಾತ್ರಿ ಚೈತಾಲಿ ಪತಿ ಪ್ರದೀಪ ಕಿರಣಗಿ ಇವಳು ಏಳು ತಿಂಗಳು ಗರ್ಭಿಣಿಯಾಗಿದ್ದಳು ಅವಳನ್ನು ಶಿರಗುಪ್ಪಿ ಆಸ್ಪತ್ರೆಗೆ ತಪಾಸಣೆ ಕರೆದುಕೊಂಡು ಹೋಗಿ ಶಿರಗುಪ್ಪಿಯಿಂದ ಉಗಾರ ಬುದ್ರುಕ ಗ್ರಾಮಕ್ಕೆ ಬರುವಾಗ. ರಾತ್ರಿ 8.30 ಕ್ಕೆ ರಸ್ತೆ ಪಕ್ಕಗಾಡಿ ನಿಲ್ಲಿಸಿ KA 22 MD 4238 ಕಾರು ಡಿಕ್ಕಿ ಹೊಡೆಸಿ ತಲೆಗೆ ಗಂಭೀರವಾಗಿ ಗಾಯಗೊಳಿಸಿದಲ್ಲದೆ ಅದೇ ಕಾರಿನಲ್ಲಿ ಮಿರಜ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾನೆ. ಆದರೆ ತಡರಾತ್ರಿ ಯುವತಿ ಮೃತಪಟ್ಟಿದ್ದಾಳೆ.
ಆದರೆ ಮೃತ ಯುವತಿಯ ತಂದೆ ಇದು ಕೊಲೆ ಎಂದು ಕಾಗವಾಡ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದ ಹಿನ್ನಲೆಯಲ್ಲಿ ಪೊಲೀಸರು ಮೃತ ಯುವತಿ ಪತಿ ಪ್ರದೀಪ ಕಿರಣಗಿ , ಕಾರು ಚಾಲಕ ರಾಜೇಂದ್ರ ಗಣಪತಿ ಕಾಂಬಳೆ, ಸದ್ದಾಂ ಅಕ್ಬರ್ ಇನಾಮದಾರ ಸೇರಿದಂತೆ ಮೂವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದಾಗಿ ಆರೋಪಿಗಳು ತಪ್ಪೋಪ್ಪಿಕೊಂಡಿರುತ್ತಾರೆ. .
ಇನ್ನು ಆರೋಪಿಗಳನ್ನು ಸ್ಥಳ ಮಹಜರು ನಡೆಸಿದ ಅಥಣಿ ಸಿಪಿಐ ಸಂತೋಷ ಹಳ್ಳೂರ, ಪಿಎಸ್ಐ ರಾಘವೇಂದ್ರ ಖೋತ ನ್ಯಾಯಲಯಕ್ಕೆ ಹಾಜರು ಪಡಿಸಿದ್ದು ಕೃತ್ಯದಲ್ಲಿ ಇನ್ನು ಕೆಲ ಜನ ಭಾಗಿಯಾಗಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಿ ತನಿಖೆ ಮುಂದುವರಿಸಿದ್ದಾರೆ.
ವರದಿ: ಚಂದ್ರಕಾಂತ ಕಾಂಬಳೆ




