ಮಹಿಳೆಯೊಬ್ಬಳಿಗೆ ಗರ್ಭಾವಸ್ಥೆಯನ್ನು ಮುಂದುವರಿಸಲು ಒತ್ತಾಯಿಸುವುದು ಆಕೆಯ ದೇಹದ ಮೇಲಿನ ಹಲ್ಲೆ ಎಂದು ಅಭಿಪ್ರಾಯ ಪಟ್ಟ ಹೈಕೋರ್ಟ್ ಗರ್ಭಪಾತಕ್ಕೆ ಪತಿಯ ಅನುಮತಿ ಅಗತ್ಯವಿಲ್ಲ ಎಂದು ಮಹತ್ವದ ತೀರ್ಪು ನೀಡಿದೆ. ಇದು ಆಕೆಯ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಅದು ಹೇಳಿದೆ.
ತನ್ನ ಮಾತನ್ನು ಕೇಳದೆ ಪತ್ನಿಯ 14 ವಾರಗಳ ಗರ್ಭಧಾರಣೆಯನ್ನು ಅಂತ್ಯಗೊಳಿಸಿದ್ದಕ್ಕಾಗಿ ಪತಿ ದಾಖಲಿಸಿದ ಕ್ರಿಮಿನಲ್ ಪ್ರಕರಣವನ್ನು ಅದು ವಜಾಗೊಳಿಸಿದೆ.
ಗರ್ಭಧಾರಣೆಯ ವೈದ್ಯಕೀಯ ಮುಕ್ತಾಯ ಕಾಯ್ದೆಯಡಿಯಲ್ಲಿ, ಗರ್ಭಪಾತಕ್ಕೆ ಪತಿಯ ಒಪ್ಪಿಗೆ ಅಗತ್ಯವಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.




