ಸಾಹಸಿಗರಿಗೆ ಸಾಹಸ ಮಾಡಿ ತೋರಬೇಕೆಂಬ ಹಂಬಲ ಇದ್ದೇ ಇರುತ್ತದೆ. ಇದರಲ್ಲಿ ಶಿಖರ ಏರಿ ಸಾಹಸ ಮಾಡುವುದು ಕೂಡ ಕೆಲವರಿಗೆ ಆಸಕ್ತಿ. ಇಂಥ ರ‍್ವತಾರೋಹಿಗಳಿಗೆ ಉತ್ತರಾಖಂಡ ಸರಕಾರ ಗುಡ್ ನ್ಯೂಜ್ ನೀಡಿದೆ.
ಉತ್ತರಾಖಂಡದಲ್ಲಿ ಶಿಖರಗಳಿಗೆನೋ ಕಮ್ಮಿ ಇಲ್ಲ. ಇಲ್ಲಿರುವ ಶೀಖರಗಳನ್ನು
ಏರಿ ತಮ್ಮ ಸಾಹಸ ತೋರಲು ಉತ್ತರಾಖಂಡ ಸರಕಾರ ಈಗ ೮೩ ಪ್ರಮುಖ ಹಿಮಾಲಯ ಶಿಖರಗಳನ್ನು ರ‍್ವತಾರೋಹಿಗಳ ಸಾಹಸಕ್ಕೆ ವೇದಿಕೆಯಾಗಿಸಲು ಮುಕ್ತವಾಗಿರಿಸಿದೆ.
ಸಾಹಸ ಪ್ರವಾಸೋದ್ಯಮವನ್ನು ಬಲ ಪಡಿಸಲು, ಭಾರತ ಮತ್ತು ವಿದೇಶಗಳ ರ‍್ವತಾರೋಹಿಗಳನ್ನು ಪ್ರೋತ್ಸಾಹಿಸಲು ಉತ್ತರಾಖಂಡ ಸರಕಾರ ಈ ಕ್ರಮ ಕೈಗೊಂಡಿದೆ. ರ‍್ವತಾರೋಹಕ್ಕೆ ವಿಧಿಸಲಾಗುತ್ತಿದ್ದ ಹೆಚ್ಚುವರಿ ಶುಲ್ಕಗಳನ್ನು ತೆಗೆದುಹಾಕಿದೆ.
ಸಾಹಸ ಪ್ರವಾಸೋದ್ಯಮ ಬಲಪಡಿಸಲು ಒತ್ತು




