ಮೈಸೂರು : ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಬ್ರೇಕ್ ಫಾಸ್ಟ್ ಮುಖಾಂತರ ಫುಲ್ ಸ್ಟಾಪ್ ಹಾಕಿದ್ದಾರೆ. ನಮ್ಮ ನಡುವೆ ಯಾವುದೇ ಗೊಂದಲಗಳಿಲ್ಲ ಬಿನಾಭಿಪ್ರಾಯಗಳಿಲ್ಲ ನಾವು ಅಣ್ಣ ತಮ್ಮ ಇದ್ದಂಗೆ ಅಂತ ಒಗ್ಗಟ್ಟಿನ ಸಂದೇಶ ಸಾರಿದ್ದಾರೆ.
ಇದೀಗ ಸಿಎಂ ವಿಚಾರಕ್ಕೆ ಸಂಬಂಧಪಟ್ಟಂತೆ ಮೈಸೂರಲ್ಲಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ನನಗೂ ಮುಖ್ಯಮಂತ್ರಿ ಆಗುವ ಆಸೆ ಇದೆ ಆದರೆ ಹೈಕಮಾಂಡ್ ಈ ವಿಚಾರವಾಗಿ ಎಲ್ಲವನ್ನು ನಿರ್ಧರಿಸುತ್ತದೆ.
ಈ ವಿಚಾರದಲ್ಲಿ ನನ್ನನ್ನು ಯಾಕೆ ಹೇಳಿದೆ ತರುತ್ತಾ ಇದ್ದೀರಾ ನನಗೆ ಆಸೆ ಇದೆ ಆದರೆ ಸಮಯ ಸಂದರ್ಭದಲ್ಲಿ ಕಾಂಗ್ರೆಸ್ ಹೈಕಮಾಂಡ್ ತೀರ್ಮಾನವೇ ಅಂತಿಮ ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೆ ನೋಡೋಣ ಮೈಸೂರಿನಲ್ಲಿ ಸಚಿವ ಧನಿಷ್ಠ ಹೇಳಿಕೆ ನೀಡಿದರು.




